ರಾಮಕುಂಜ: ರಾಮಕುಂಜ ಗ್ರಾಮದ ಸಂಪ್ಯಾಡಿ ದಿ.ತೋಟ ಸುಬ್ರಾಯ ಭಟ್ ಅವರ ಪತ್ನಿ ಭಾಗೀರಥಿ (88ವ.)ರವರು ಅಲ್ಪಕಾಲದ ಅಸೌಖ್ಯದಿಂದ ಎ.16ರಂದು ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೃಷಿ ಕುಟುಂಬದವರಾಗಿದ್ದ ಭಾಗೀರಥಿ ಅವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪುತ್ರರಾದ ಕೃಷಿಕ ಟಿ.ನಾಗರಾಜ ಭಟ್, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ., ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ಟಿ. ನಾರಾಯಣ ಭಟ್, ಚೆನ್ನೈ ನಿವಾಸಿ ಟಿ.ಕೃಷ್ಣಮೂರ್ತಿ, ಕೃಷಿಕ ಟಿ. ಹರೀಶ್ ಭಟ್, ಪುತ್ರಿಯರಾದ ಟಿ. ಲಾವಣ್ಯ, ಟಿ.ಗೀತಾ, ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.