ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವದ ದಿನದಂದು ಪುತ್ತೂರು ವಕೀಲರ ಸಂಘ, ಸರಸ್ವತೀ ಚಾರಿಟೇಬಲ್ ಟ್ರಸ್ಟ್ ಹಾಗೂ ದ್ವಾರಕಾ ಪ್ರತಿಷ್ಠಾನದ ವತಿಯಿಂದ ದೇವಳದ ಎದುರು ಗದ್ದೆಯಲ್ಲಿ 7ನೇ ವರುಷದ ಉಚಿತ ಕುಡಿಯುವ ನೀರಿನ ವಿತರಣಾ ಸೇವೆ ಎ.17ರಂದು ನಡೆಯಿತು. 5ನೇ ಹೆಚ್ಚುವರಿ ಜಿಲ್ಲಾ ಸಿವಿಲ್ ನ್ಯಾಯಾಲಯ ನ್ಯಾಯಾಧೀಶರಾದ ಸರಿತಾ ಡಿ ಅವರು ಉಚಿತ ನೀರು ವಿತರಣಾ ಸೌಲಭ್ಯವನ್ನು ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷರು ಜಗನ್ನಾಥ್ ರೈ, ಪ್ರಿಯ ರವಿ ಜೊಗ್ಲೆಕರ್, ದೇವರಾಜ್ ವೈ.ಎಚ್, ಅರ್ಚನಾ ಕೆ. ಉನ್ನಿತಾನ್, ಶಿವಣ್ಣ ಎಚ್. ಆರ್, ಯೋಗೇಂದ್ರ ಶೆಟ್ಟಿ, ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸರಸ್ವತಿ ಚಾರಿಟೇಬಲ್ ಮ್ಯಾನೇಜಿಂಗ್ ಟ್ರಸ್ಟಿ, ಎಸ್. ಆರ್ ಸತೀಶ್ಚಂದ್ರ, ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಮತ್ತು ಇತರರು ಉಪಸ್ಥಿತರಿದ್ದರು.
ಏಪ್ರಿಲ್ ನ ಬೇಸಿಗೆಯಲ್ಲಿ ದಾಹ ಅಧಿಕ ಇರುತ್ತದೆ. ಜಾತ್ರೆಗೆ ಆಗಮಿಸಿದ ಭಕ್ತಾದಿಗಳ ಬಾಯಾರಿಕೆ ತಣಿಸಲು ಹಮ್ಮಿಕೊಂಡಿದ್ದ ಉಚಿತ ಕುಡಿಯುವ ನೀರಿನ ವ್ಯವಸ್ಥೆಯನ್ನು ಬಹಳಷ್ಟು ಮಂದಿ ಸದುಪಯೋಗಪಡಿಸಿಕೊಂಡರು.
