ಕಡಬ: ಕುಂತೂರು ಗ್ರಾಮದ ಕುಂತೂರುಪದವು-ರಾಮಡ್ಕದಲ್ಲಿ ನವೀಕೃತಗೊಂಡ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಲೋಕಾರ್ಪಣೆ ಕಾರ್ಯಕ್ರಮ ಗಣಪತಿ ಹೋಮ, ಭಜನೆ, ಕುಣಿತ ಭಜನೆ, ಶ್ರೀ ಸತ್ಯನಾರಾಯಣ ಪೂಜೆ, ದುರ್ಗಾಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳೊಂದಿಗೆ ಎ.18ರಂದು ನಡೆಯಿತು.

ಬೆಳಿಗ್ಗೆ ಗಣಪತಿ ಹೋಮ ನಡೆಯಿತು. ಬಳಿಕ 9.57ರ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ಭಜನಾ ಮಂದಿರದ ಲೋಕಾರ್ಪಣೆ ನಡೆಯಿತು. ಕುಂತೂರುಪದವು ಅದಿತಿ ಟ್ರಾನ್ಸ್‌ಪೋರ್ಟ್ ಮಾಲಕ ಸುರೇಶ್ ಕೆ.ಕುಂಡಡ್ಕ ದೀಪ ಪ್ರಜ್ವಲಿಸಿ ಲೋಕಾರ್ಪಣೆಗೊಳಿಸಿದರು.
ಶ್ರೀ ದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಹರೀಶ್ ಮುಂಡಾಳ ಮತ್ರಾಡಿ, ಉಪಾಧ್ಯಕ್ಷ ಸುಜಿತ್ ಕುಂಡಡ್ಕ, ಕಾರ್ಯದರ್ಶಿ ಶಶಿಕಿರಣ್ ಪದವು, ಜೊತೆ ಕಾರ್ಯದರ್ಶಿ ನಿಧೀಶ್ ಅಲಂಗಪ್ಪೆ, ಕೋಶಾಧಿಕಾರಿ ದೀಕ್ಷಿತ್ ಅಲಂಗಪ್ಪೆ, ಸದಸ್ಯರಾದ ಬಾಬು ಗೌಡ ಕೆ.ಎಸ್.ಕುಂಡಡ್ಕ, ಪಿ.ಜಿ.ರಾಜು ಕಂಡತ್ತಡ್ಕ, ಸುಬ್ರಹ್ಮಣ್ಯ ಕೆಂದ್ರಾಜೆ, ಪ್ರಶಾಂತ್ ಭಟ್ ಕೆಂದ್ರಾಜೆ, ನೀಲಯ್ಯ ಗೌಡ ಕಂಡತ್ತಡ್ಕ, ವಸಂತ ಗೌಡ ಜಾಲುಮನೆ, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಡಾ.ಕುಮಾರ ಸುಬ್ರಹ್ಮಣ್ಯ ಭಟ್, ಅಧ್ಯಕ್ಷ ಉದಯಶಂಕರ ಭಟ್ ಬಲ್ಲಾಳಿಕೆ, ಉತ್ಸವ ಸಮಿತಿ ಅಧ್ಯಕ್ಷ ಯತೀಶ ಕುಂಡಡ್ಕ ಮತ್ತು ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.