ನಾಳೆ (ಏ.20) ಪಾಣಾಜೆಯಲ್ಲಿ ಜಿಲ್ಲಾ ಯಾದವ ಸಮ್ಮೇಳನ

0

ಪಾಣಾಜೆ: ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು ಹಾಗೂ ಸುಳ್ಯ, ಬಂಟ್ವಾಳ, ಮಂಗಳೂರು ತಾಲೂಕು ಸಮಿತಿಗಳ ಸಹಯೋಗದಲ್ಲಿ ಪುತ್ತೂರು ತಾಲೂಕು ಸಮಿತಿ ಆಶ್ರಯದಲ್ಲಿ ಜಿಲ್ಲಾ ಯಾದವ ಸಮ್ಮೇಳನವು ಪಾಣಾಜೆ ರಣಮಂಗಲ ಸಭಾಭವನದಲ್ಲಿ ಏ. 20 ರಂದು ನಡೆಯಲಿದೆ.


ಯಾದವ ಚಾರಿಟೇಬಲ್‌ ಟ್ರಸ್ಟ್‌ ಮಂಗಳೂರು ಇದರ ಅಧ್ಯಕ್ಷ ನಾರಾಯಣ ಪಿ. ವೇದಿಕೆ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ ಗಣಪತಿ ಹೋಮ, ಸತ್ಯನಾರಾಯಣ ಪೂಜೆ ನೆರವೇರಲಿದೆ. ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ʻಪಾಂಚಜನ್ಯ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ನಡೆದು, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರಗಲಿದೆ. ಬಳಿಕ ಸಭಾ ಕಾರ್ಯಕ್ರಮ, ಸನ್ಮಾನ, ಪ್ರತಿಭಾ ಪುರಸ್ಕಾರ ನಡೆಯಲಿದೆ. ಮಧ್ಯಾಹ್ನ ಸಹಭೋಜನ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿದು, ಅಪರಾಹ್ನ ʻಯಾದವ ಸಂಘಟನೆಯ ಬಗ್ಗೆ ಚಿಂತನ-ಮಂಥನ ನಡೆದು ಬಳಿಕ ಸಮಾರೋಪ ಸಮಾರಂಭ ಜರಗಲಿದೆ. ಸಭಾ ಕಾರ್ಯಕ್ರಮವನ್ನು ಎಂಎಲ್‌ಸಿ ಡಿ.ಟಿ. ಶ್ರೀನಿವಾಸ್‌ ಉದ್ಘಾಟಿಸಲಿದ್ದಾರೆ. ಶಾಸಕ ಧೀರಜ್‌ ಮುನಿರಾಜ್‌, ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ, ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.


 ಭಗವಾನ್ ಶ್ರೀ ಕೃಷ್ಣ ಅವತರಿಸಿದ ಯದುವಂಶವು ಮುಂದಕ್ಕೆ ಯಾದವ ಸಮುದಾಯವಾಗಿ‌ ನಾಡಿನೆಲ್ಲೆಡೆ‌ ಪಸರಿಸಿದೆ.  ಆಯಾ‌ ಪ್ರಾದೇಶಿಕತೆಗೆ ಹೊಂದಿಕೊಂಡು ‌ತಮ್ಮದೇ‌‌ ಸಂಪ್ರದಾಯವನ್ನು ಕಾಪಾಡಿಕೊಂಡು  ಈ ಸಮುದಾಯವು ಸಮಾಜದಲ್ಲಿ ‌ಗುರುತಿಸಿಕೊಂಡಿದೆ. ‌ಕರ್ನಾಟಕದ ಗಡಿನಾಡು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಯಾದವ ಸಮುದಾಯದ ‌ಉಪಜಾತಿಯಾಗಿ ಮಣಿಯಾಣಿ ಜಾತಿಯವರು ವಾಸಿಸುತ್ತಿದ್ದಾರೆ. ಸಾಂಪ್ರದಾಯಿಕವಾದ ಕೃಷಿ ಚಟುವಟಿಕೆಗಳು, ಗೋ ಸಾಕಾಣಿಕೆ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳನ್ನು ಕೈಗೊಳ್ಳುತ್ತಾ ಸಾಂಪ್ರದಾಯಿಕವಾಗಿ ಕೇರಳದ ಕೆಲವೊಂದು ಪದ್ದತಿ ಕಟ್ಟುಪಾಡುಗಳನ್ನು ಆಚರಿಸಿಕೊಂಡು ಜೀವನವನ್ನು ನಡೆಸುತ್ತಿದ್ದಾರೆ.


ಯಾದವ ಸಭಾ ಕರ್ನಾಟಕ ಕೇಂದ್ರ ‌ಸಮಿತಿ (ರಿ)ಮಂಗಳೂರು ಸಮಾಜದಲ್ಲಿನ ಎಲ್ಲಾ ಜಾತಿ ಸಮುದಾಯಗಳು ತಮ್ಮವರನ್ನು ಸಂಘಟಿಸಿಕೊಂಡು ತಮ್ಮ ಸಮಾಜದ ‌ಬೇಡಿಕೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗುತ್ತಿದೆ. ಈ‌ ನಿಟ್ಟಿನಲ್ಲಿ ಯಾದವ ಸಮುದಾಯದ ಹಿರಿಯರು ‌ಕೂಡ ಒಟ್ಟು ಸೇರಿ ತಮ್ಮ ಸಮುದಾಯ‌ ಬಾಂಧವರನ್ನು ಸಂಘಟಿಸುವ ಪ್ರಯತ್ನವನ್ನು 1984 -85 ರ ಆಸುಪಾಸಿನಲ್ಲಿ ‌ನಡೆಸಿ 1986ರ ಜನವರಿ ‌ತಿಂಗಳಿನಲ್ಲಿ ಮಹಾಲಿಂಗ ಮಣಿಯಾಣಿ ಕೆಮನಬಳ್ಳಿ‌ ಇವರು ಅಧ್ಯಕ್ಷರಾಗಿ,  ‌ಜಯಾನಂದ‌ ಉಳಯ‌ ಇವರು ಪ್ರಧಾನ ಕಾರ್ಯದರ್ಶಿಯಾಗಿ  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ‌ ಯಾದವ – ಮಣಿಯಾಣಿ ಸಮುದಾಯವನ್ನು ಸಂಘಟಿಸಿಕೊಂಡು ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿಯನ್ನು ‌ರಚಿಸಲಾಯಿತು. ಈ ಸಮಿತಿಯನ್ನು ಪ.ಪೂ. ಶ್ರೀ ಶ್ರೀ ರಮಾನಂದ ಸ್ವಾಮಿಜಿ ಶ್ರೀ ‌ಕ್ಷೇತ್ರ‌ ಕೊಲ್ಯ – ಮಂಗಳೂರು ‌ಇವರು ಉದ್ಘಾಟಿಸಿದ್ದರು. ಈ ಕೇಂದ್ರ ‌ಸಮಿತಿಯ‌‌ ಅಡಿಯಲ್ಲಿ ತಾಲೂಕು ‌ಸಮಿತಿ, ಪ್ರಾದೇಶಿಕ ‌ಸಮಿತಿಗಳು ರಚನೆಗೊಂಡು ಕೇಂದ್ರ ಸಮಿತಿಯ ‌ಬಲವನ್ನು‌ ಹೆಚ್ಚಿಸಿತು. ಪ್ರಸ್ತುತ ಮಂಗಳೂರು, ‌ಬಂಟ್ವಾಳ,‌ಪುತ್ತೂರು, ಸುಳ್ಯ,‌ಬೆಳ್ತಂಗಡಿ‌,ಕಡಬ, ಉಳ್ಳಾಲ ತಾಲೂಕು ಸಮಿತಿಗಳು ಹಾಗೂ ಆಯಾ ತಾಲೂಕಿನಲ್ಲಿ ‌ಪ್ರಾದೇಶಿಕ‌ ಸಮಿತಿಗಳು ‌ರಚನೆಗೊಂಡು‌ ಸಂಘಟನೆಯು ವ್ಯವಸ್ಥಿತವಾಗಿ ‌ಮುನ್ನಡೆಯುತ್ತಿದೆ.

ಪುತ್ತೂರು ತಾಲೂಕು ಸಮಿತಿಯಿಂದ ಸಮ್ಮೇಳನದ ಆತಿಥ್ಯ – ಶ್ರೀಪ್ರಸಾದ್‌ ಪಾಣಾಜೆ
ಕೇಂದ್ರ ಸಮಿತಿಯ ನೇತೃತ್ವದಲ್ಲಿ ‌ಪ್ರತಿ ತಾಲೂಕು ‌ಸಮಿತಿಯವರ ಸಹಯೋಗದೊಂದಿಗೆ  ಜಿಲ್ಲಾ ಸಮ್ಮೇಳನವು ವಿವಿಧ ತಾಲೂಕಿನಲ್ಲಿ ‌ನಡೆಸಲಾಗುತ್ತಿದೆ. ಈ ಬಾರಿ ಜಿಲ್ಲಾ‌ ಸಮ್ಮೇಳನದ ಆತಿಥ್ಯವನ್ನು ಪುತ್ತೂರು ತಾಲ್ಲೂಕು ಸಮಿತಿ ವಹಿಸಿಕೊಂಡಿದೆ. ಜಿಲ್ಲಾ ಸಮ್ಮೆಳನವನ್ನು ವ್ಯವಸ್ಥಿತವಾಗಿ ಆಯೋಜನೆಗೊಳಿಸುವ ನಿಟ್ಟಿನಲ್ಲಿ ಯಾದವ ಸಭಾ ಪುತ್ತೂರು ತಾಲೂಕು ಸಮಿತಿಯ ನೇತೃತ್ವದಲ್ಲಿ, ಪ್ರಾದೇಶಿಕ ಸಮಿತಿಗಳ ಸಹಕಾರದೊಂದಿಗೆ ಅಭೂತಪೂರ್ವ ಕೆಲಸ ಕಾರ್ಯಗಳು ನಡೆದಿವೆ. ಈಗಾಗಲೇ ಜಿಲ್ಲಾ ಮಟ್ಟದ ಕ್ರೀಡಾಕೂಟವು ಅಭೂತಪೂರ್ವ ಯಶಸ್ಸನ್ನು  ಕಂಡಿದೆ. ಕೇಂದ್ರ ಸಮಿತಿಯ ಮಾರ್ಗದರ್ಶನ, ತಾಲ್ಲೂಕು ಸಮಿತಿಯ ಹಾಗೂ ಪ್ರಾದೇಶಿಕ ಸಮಿತಿಗಳ ಸಹಕಾರದೊಂದಿಗೆ ಈ ಸಮ್ಮೇಳನ ನಡೆಯಲಿದೆ. ಸುಮಾರು 2 ಸಾವಿರಕ್ಕೂ ಮಿಕ್ಕಿ ಸಮಾಜ ಬಾಂಧವರು ಭಾಗವಹಿಸುವ ನಿರೀಕ್ಷೆ ಇದೆ.

LEAVE A REPLY

Please enter your comment!
Please enter your name here