ಪುತ್ತೂರು: ಎ.20-21ರಂದು ಮೊಟ್ಟೆತ್ತಡ್ಕ ಮಿಶನ್‌ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಜೀರ್ಣೋದ್ದಾರದ ಬಗ್ಗೆ ಅನುಜ್ಞಾ ಕಲಶ ಮತ್ತು ಬಾಲಾಲಯ ಪ್ರತಿಷ್ಠೆ ಮತ್ತು ನಾಗಶಿಲಾ ಪ್ರತಿಷ್ಠಾ ಕಲಶವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳು ನಡೆಯಲಿರುವುದು.
ಎ.20 ರಂದು ಸಂಜೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದಶುದ್ದಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾಬಲಿ, ರಾತ್ರಿ ಮಹಾಪೂಜೆ, ಅನ್ನಸಂತರ್ಪಣೆ, ಎ.21 ರಂದು ಬೆಳಿಗ್ಗೆ ಮಹಾ ಗಣಪತಿ ಹೋಮ, ಅನುಜ್ಞಾ ಕಲಶ ಪೂಜೆ, ಅನುಜ್ಞಾಕಲಶಾಭೀಷೇಕ. ತಂಬಿಲ ಸೇವೆ, ಶ್ರೀ ಚಾಮುಂಡೇಶ್ವರಿ ಕಲ್ಲುರ್ಟಿ, ಗುಳಿಗ ದೈವಗಳ ಬಾಲಾಲಯ ಪ್ರತಿಷ್ಠೆ, ಪ್ರಸಾದ ವಿತರಣೆ ಇತ್ಯಾದಿ ಧಾರ್ಮಿಕ ಕಾರ್ಯಗಳು ನಡೆಯಲಿದೆ. ಈ ಧಾರ್ಮಿಕ ಕಾರ್ಯದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.