ಎ.23ರಂದು ಭಂಡಾರ ಚಾವಡಿ ಯಕ್ಷಗಾನ ,ಎ.24ರಂದು ದೈವಗಳ ನೇಮೋತ್ಸವ
ಸವಣೂರು: ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ಎ.22ರಿಂದ ಎ.24ರವರೆಗೆ ಶ್ರೀಧರ್ಮರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ವರ್ಷಾವಧಿ ಜಾತ್ರೋತ್ಸವ ನಡೆಯಲಿದೆ.
ಎ.22ರಂದು ಪೂರ್ವಾಹ್ನ ಮುಂಡ್ಯೆ ಆರೋಹಣ ನಡೆಯಿತು.ಎ.23ರಂದು ಬೆಳಿಗ್ಗೆ ತಳಿರು ತೋರಣ,ರಾತ್ರಿ ದೈವಗಳ ಭಂಡಾರ ತೆಗೆಯುವುದು ,ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ 8.30ಕ್ಕೆ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಇದರ 16ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ನಡೆಯಲಿದೆ. ಸಭೆಯನ್ನು ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ತಾರಾನಾಥ ಬೊಳಿಯಾಲ ವಹಿಸುವರು. ಅತಿಥಿಗಳಾಗಿ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷ, ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ದ್ವಾರಕಾ ಕಾರ್ಪೋರೇಷನ್ ಪ್ರೈವೆಟ್ ಲಿಮಿಟೆಡ್ ನ ಗೋಪಾಲಕೃಷ್ಣ ಭಟ್, ಕುಂಬ್ರ ಮಾತೃಶ್ರೀ ಅರ್ತ್ ಮೂವರ್ಸ್ ಮಾಲಕ ಮೋಹನ್ ದಾಸ್ ರೈ ಕುಂಬ್ರ, ವಿನೋದ್ ರೈ ಗುತ್ತಿನಮನೆ ಪಾಲ್ತಾಡಿ, ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಿನಯಚಂದ್ರ ಕೆಳಗಿನ ಮನೆ ಪಾಲ್ಗೊಳ್ಳುವರು. ಆಡಳಿತ ಸಮಿತಿ ಮಾಜಿ ಅಧ್ಯಕ್ಷ ಸಂಜೀವ ಗೌಡ ಪಾಲ್ತಾಡಿ ಅವರಿಗೆ ಸನ್ಮಾನ ನಡೆಯಲಿದೆ. 2023-24ನೇ ಸಾಲಿನ ಶೈಕ್ಷಣಿಕ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ. ಬಳಿಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾ ಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ ಭಂಡಾರ ಚಾವಡಿ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.
ಎ.24ರಂದು ಬೆಳಿಗ್ಗೆ 6.30ಕ್ಕೆ ಉಳ್ಳಾಕುಲು ದೈವದ ನೇಮ ನಡೆದು ಸಿರಿಮುಡಿ ಗಂಧಪ್ರಸಾದ, ನಂತರ ಕೊಳ್ಳಿ ಕುಮಾರ ದೈವದ ನೇಮ, ಮಹಿಷಂತಾಯ ದೈವದ ನೇಮ, ಕೊಡಮಣಿತ್ತಾಯ ದೈವದ ಒಲಸರಿ ನೇಮೋತ್ಸವ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ,ಪುರುಷ ದೈವದ ನೇಮೋತ್ಸವ, ಪಂಜುರ್ಲಿ ದೈವದ ನೇಮೋತ್ಸವ, ಸಂಜೆ ವ್ಯಾಘ್ರ ಚಾಮುಂಡಿ ದೈವದ ಒಲಸರಿ ನೇಮೋತ್ಸವ ನಡೆದು ರಾತ್ರಿ ಮುಂಡ್ಯೆ ಅವರೋಹಣ ನಡೆಯಲಿದೆ ಎಂದು ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ಗೌರವಾಧ್ಯಕ್ಷ ,ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಅಧ್ಯಕ್ಷ ವಿನಯಚಂದ್ರ ಕೆಳಗಿನಮನೆ ಹಾಗೂ ಸಮಿತಿಯ ಪದಾಧಿಕಾರಿಗಳು, ದೈವಸ್ಥಾನಕ್ಕೆ ಸಂಬಂಧಪಟ್ಟ ಆರುಮನೆಯ ಪ್ರಮುಖರು ತಿಳಿಸಿದ್ದಾರೆ.