





ವಿಟ್ಲ: ರಂಗಮಂದಿರ ನಿವಾಸಿ ರಮೇಶ್ ಆಚಾರ್ಯ ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ.


ವಿಟ್ಲ ಹನುಮಾನ್ ಪ್ರಿಂಟರ್ಸ್ ನಲ್ಲಿ ಸುಮಾರು 50 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಇವರು ವಿಟ್ಲ ಪ್ರಶಸ್ತಿ ವಿಜೇತ ಯುವಕ ಮಂಡಲ(ರಿ) ಇದರ ಗೌರವಾಧ್ಯಕ್ಷರಾಗಿದ್ದರು.





ಕಳೆದ ವರ್ಷ ವಯೋಸಹಜ ಹಿನ್ನೆಲೆಯಲ್ಲಿ ತನ್ನ ವೃತ್ತಿಯಿಂದ ನಿವೃತ್ತಗೊಂಡಿದ್ದ ಇವರು ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದರು. ಮೃತರು ಹವ್ಯಾಸಿ ನಾಟಕ ಕಲಾವಿದರಾಗಿ ಮತ್ತು ಉತ್ತಮ ಹಿನ್ನೆಲೆ ಗಾಯಕರಾಗಿ ಜನರ ಪ್ರೀತಿಪಾತ್ರರಾಗಿದ್ದರು.










