*ಮದುವೆ – ಶುಭ ಕಾರ್ಯಕ್ಕೆ ಧರಿಸುವಂತಹ ವಿವಿಧ ಆಭರಣಗಳೆಲ್ಲವೂ ಅತ್ಯುತ್ತಮ ದರದಲ್ಲಿ…
*ಜ್ಯುವೆಲ್ಲರಿ ಮಾರಾಟ ಮಾತ್ರವಲ್ಲದೇ ಬಾಡಿಗೆ ರೀತಿಯಲ್ಲೂ ಆಭರಣಗಳನ್ನು ನೀಡುತ್ತಿರುವ ಕ್ಸಿತಿ …
*ವಿನೂತನ ಮಳಿಗೆಯನ್ನು ಉದ್ಘಾಟಿಸಿ ,ಹಾರೈಸಿದ ಸ್ವರ್ಣೊದ್ಯಮಿ ಬಲರಾಮ ಆಚಾರ್ಯ…
ಕಿಯೋಸ್ಕ್ ಕಲ್ಪನೆಯಲ್ಲೇ ಪುತ್ತೂರಿನಲ್ಲೂ ಒಂದು ಹೊಸ ಕಿಯೋಸ್ಕ್ ಪ್ರಾರಂಭಗೊಂಡಿರುವುದು ಅತ್ಯಂತ ಖುಷಿಯ ವಿಚಾರವಾಗಿದೆ. ಕ್ಸಿತಿ ಎನ್ನುವ ಹೆಸರಿನಲ್ಲೇ ವೈಶಿಷ್ಟ್ಯ ಜೊತೆಗೆ ಅರ್ಥಪೂರ್ಣವೂ ಆಗಿದ್ದು , ಕ್ಸಿತಿ ಎನ್ನುವ ಪಧದ ನಿಜಾರ್ಥ ಸೌಂದರ್ಯ. ಈ ಸೌಂದರ್ಯವು ಹೆಚ್ಚಾಗಲು ಜ್ಯುವೆಲ್ಲರಿ ಪ್ರಮುಖ ಕಾರಣವೆಂದು ಪುತ್ತೂರಿನ ಹೆಸರಾಂತ ಸ್ವರ್ಣೋದ್ಯಮಿ ಹಾಗೂ ಜಿ.ಎಲ್ . ಸಮೂಹ ಸಂಸ್ಥೆಗಳ ಮುಖ್ಯಸ್ಥ ಬಲರಾಮ ಆಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಏ. 21 ರಂದು ಜಿ.ಎಲ್ ವನ್ ಮಾಲ್ ಇಲ್ಲಿಗೆ ದರ್ಬೆ ಪೋಪ್ಯುಲರ್ ಸ್ವೀಟ್ಸ್ ಬಳಿಯ ಸಂಕೀರ್ಣದಲ್ಲಿ ಕಳೆದ ಎರಡು ವರ್ಷಗಳ ಕಾಲ ವ್ಯವಹರಿಸುತ್ತಿದ್ದ ಅನ್ನಪೂರ್ಣ ಶರ್ಮ ಇವರ ಮಾಲೀಕತ್ವದ ಬೀಡ್ಸ್ ಜ್ಯುವೆಲ್ಲರಿ ಮಳಿಗೆ ಸ್ಥಳಾಂತರಗೊಂಡಿದ್ದು , ನೂತನ ಮಳಿಗೆಯ ಇದರ ಉದ್ಘಾಟನೆ ನೆರವೇರಿಸಿ ,ಬಳಿಕ ಮಾತನಾಡಿದ ಅವರು , ಜ್ಯುವೆಲ್ಲರಿ ಅಂದರೆ ಹಿಂದಿನ ಕಾಲದಲ್ಲಿ ಚಿನ್ನಾಭರಣವೆಂಬ ಕಲ್ಪನೆ ಮಾತ್ರವೇ ಜನರಲ್ಲಿತ್ತು. ಬದಲಾದ ಕಾಲಘಟ್ಟದಲ್ಲಿ ಬೇರೆ ಬೇರೆ ಬಗೆಯ ಜ್ಯುವೆಲ್ಲರಿ ಮಾರುಕಟ್ಟೆ ಪ್ರವೇಶಿಸಿವೆ. ಪ್ರಿಶಿಯಶ್ ಸ್ಟೋನ್ , ಸೆಮಿ ಪ್ರಿಶಿಯಸ್ ಸ್ಟೋನ್ ಇವೆಲ್ಲವೂ ಹೆಚ್ಚು ಹೆಚ್ಚು ಜನತೆಗೆ ಕೈಗೆಟುಕುವ ರೀತಿಯಲ್ಲಿ ಜೊತೆಗೆ ಫ್ಯಾಶನೆಬಲ್ ಆಗಿವೆ. ಕ್ಲೇ , ವುಡನ್ ಜ್ಯುವೆಲ್ಲರಿ , ಕಲ್ಲುಗಳಿದ್ದು ಇವಕ್ಕೆಲ್ಲ ಭಾರತ ಪ್ರಸಿದ್ಧಿ ಪಡೆದಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಇಲ್ಲಿ ವಿಶಿಷ್ಟ ರೀತಿಯ ಆಭರಣಗಳು ಇದ್ದು , ಖಂಡಿತವಾಗಿ ಮಳಿಗೆ ಶ್ರೇಯೋಭಿವೃದ್ಧಿ ಪಡೆಯುತ್ತದೆ ಎಂದು ಹಾರೈಸಿದರು.

ವೈದ್ಯೆ ಸುಲೇಖಾ ವರದರಾಜ್ , ಲಶ್ ಫ್ಯಾಷನ್ ಮಾಲಕಿ ಮಾಲಿನಿ ಕಾಶ್ಯಪ್ ,ರೋಟರಿ ಯುವ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ , ಕಾರ್ಯದರ್ಶಿ ವಚನ ಜಯರಾಮ,ಪೂರ್ವಧ್ಯಕ್ಷರುಗಳಾದ ಚೇತನ್ ಪ್ರಕಾಶ್ ಕಜೆ , ಉಮೇಶ್ ನಾಯಕ್ ಹಾಗೂ ಭರತ್ ಪೈ , ಶಿವಂ ಕಂಪ್ಯೂಟರ್ ಮಾಲಿಕ ಸುದರ್ಶನ್ ರೈ , ಹರ್ಷ ಕುಮಾರ್ ರೈ ಮಾಡಾವು , ಜೇಸಿ ಐ ವಲಯಾಧ್ಯಕ್ಷ ಸುಹಾಸ್ ಮರಿಕೆ , ಹರಿಣಾಕ್ಷಿ , ಕೃಷ್ಣ ಮೋಹನ್ , ಆಶಾ ಮೋಹನ್ , ರತ್ನಾವತಿ ವೆಂಕಟರಮಣ ಭಟ್ ದಂಪತಿ ಮುಡೋಡಿ , ಟಿ.ವಿ ಕ್ಲಿನಿಕ್ ಮಾಲೀಕ ಸತ್ಯ ಶಂಕರ್ ಹಾಗೂ ಸ್ಮಿತಾ ಸತ್ಯ ಶಂಕರ್ ಸಹಿತ ಹಲವರು ಹಾಜರಿದ್ದರು.
ಪಶುಪತಿ ಶರ್ಮ ಕಾರ್ಯಕ್ರಮ ನಿರ್ವಹಿಸಿದರು. ಮಾಲಕಿ ಅನ್ನಪೂರ್ಣ ಶರ್ಮ ಸ್ವಾಗತಿಸಿ , ವಂದಿಸಿದರು. ಸಿಬಂದಿಗಳಾದ ಚಂದ್ರಪ್ರಭಾ ಮತ್ತು ಭವ್ಯ ಸಹಕರಿಸಿದರು.
ನೂತನ ಮಳಿಗೆಯಲ್ಲಿ ಇಮಿಟೇಷನ್ ಜ್ಯುವೆಲ್ಲರಿ(ಗೋಲ್ಡ್ ಕವರಿಂಗ್ ಆಭರಣಗಳು) ಬ್ರೈಡಲ್ ಜ್ಯುವೆಲ್ಲರಿ , ಆ್ಯಂಟಿಕ್ ಜ್ಯುವೆಲ್ಲರಿ , ಹ್ಯಾಂಡ್ ಮೇಡ್ ಬೀಡ್ಸ್ ಜ್ಯುವೆಲ್ಲರಿ , ಮ್ಯಾಟ್ ಫಿನಿಷ್ ಜ್ಯುವೆಲ್ಲರಿ,ಸಿಲ್ವರ್ ಪ್ಲೇಟೆಡ್ ಜ್ಯುವೆಲ್ಲರಿ,ಎ.ಡಿ.ಸ್ಟೋನ್ ಆಭರಣಗಳ ಸಹಿತ ಎಂಗೇಜ್ಮೆಂಟ್, ಮೆಹೆಂದಿ, ಮದುವೆ,ಸೀಮಂತ,ಪಾರ್ಟಿ, ಸೆಲೆಬ್ರೇಷನ್ಸ್ ಇವಕ್ಕೆಲ್ಲಾ ವಿವಿಧ ರೀತಿಯ ಪ್ರೀಮಿಯಮ್ ಬ್ರೈಡಲ್ ಜ್ಯುವೆಲ್ಲರಿಗಳು , ಬಾಡಿಗೆಗೂ ಕ್ಸಿತಿ ಕಲೆಕ್ಸನ್ಸ್ ನಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಿದೆ.

ಭಾನುವಾರವೂ ಕೂಡ ಮಳಿಗೆ ಗ್ರಾಹಕರ ಸೇವೆಗೆ ಲಭ್ಯವಿದ್ದು , ಇನ್ನೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8123968841 ಸಂಪರ್ಕಿಸುವಂತೆ ಮಾಲಕಿ ಅನ್ನಪೂರ್ಣ ಶರ್ಮ ತಿಳಿಸಿದರು.