ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದಿಂದ “ ಶಕ್ರಜಿತು “ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ನಿವೃತ್ತ ಅಧ್ಯಾಪಕ ಬಿ.ಹುಕ್ರಪ್ಪ ಗೌಡ ಬೆಳ್ಳಿಪ್ಪಾಡಿ ಅವರ ‘ಶ್ರೀರಾಮಾಂಜನೇಯ’ ನೂತನ ಗೃಹಪ್ರವೇಶೋತ್ಸವದ ಸಂದರ್ಭದಲ್ಲಿ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಸದಸ್ಯರಿಂದ “ ಶಕ್ರಜಿತು “ ಯಕ್ಷಗಾನ ತಾಳಮದ್ದಳೆ ನಡೆಯಿತು.


ಸಂಘದ ಹಿರಿಯ ಭಾಗವತ ಗುರು ವಿಶ್ವವಿನೋದ ಬನಾರಿಯವರ ಸಂಯೋಜನೆಯಲ್ಲಿ ಮುನ್ನಡೆದ ಈ ತಾಳಮದ್ದಳೆಯ ಭಾಗವತರಾಗಿ ಮೋಹನ ಮೆನಸಿನಕಾನ, ವಿದ್ಯಾಶ್ರೀ ಆಚಾರ್ಯ ಈಶ್ವರ ಮಂಗಲ , ಅಂಕುಶ್‌ ಎಣ್ಣೆಮಜಲು ಅವರು ಕಾಣಿಸಿಕೊಂಡರು.


ಚೆಂಡೆ ಮದ್ದಳೆ ವಾದನದಲ್ಲಿ ಶ್ರೀಧರ ಆಚಾರ್ಯ ಈಶ್ವರ ಮಂಗಲ, ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ವಿಷ್ಣು ಶರಣ ಬನಾರಿ, ಬಿ.ಎಚ್.ಕೃಷ್ಣ ಪ್ರಸಾದ ಬೆಳ್ಳಿಪ್ಪಾಡಿ ‌ ಅವರು ಸಹಕರಿಸಿದರು. ಅರ್ಥಧಾರಿಗಳಾಗಿ ಬೆಳ್ಳಿಪ್ಪಾಡಿ ಸದಾಶಿವ ರೈ, ಐತಪ್ಪ ಗೌಡ ಮುದಿಯಾರು, ಯಂ. ಬಾಲಕೃಷ್ಣ ಗೌಡ ದೇಲಂಪಾಡಿ, ಯಂ.ರಮಾನಂದ ರೈ ದೇಲಂಪಾಡಿ, ಡಿ. ರಾಮಣ್ಣ ಮಾಸ್ತರ್‌ ದೇಲಂಪಾಡಿ, ನಾರಾಯಣ ದೇಲಂಪಾಡಿ, ರಾಮನಾಯ್ಕ ಬಸಿರಡ್ಕ, ಶಾಂತಾಕುಮಾರಿ ದೇಲಂಪಾಡಿ, ಮಾಸ್ಟರ್‌ ಶ್ರೀದೇವ್‌ ಈಶ್ವರಮಂಗಲ ಭಾಗವಹಿಸಿದರು.


ಈ ಸಂದರ್ಭದಲ್ಲಿ ಕಲಾವಿದರನ್ನು ವ್ಯವಸ್ಥಾಪಕರು ಶಾಲು ಹೊದಿಸಿ ಗೌರವಿಸಿದರು. ಹಿರಿಯ ಕಲಾವಿದ ಬೆಳ್ಳಿಪ್ಪಾಡಿ ಸದಾಶಿವ ರೈ ಅವರು ಸಂದರ್ಭೋಚಿತ ಮಾತನಾಡಿದರು.
ಜಯರಾಜ್‌ ಬಿ.ಎಚ್‌ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here