ಪುತ್ತೂರು: ಆನೆಗುಂದಿ ಗುರುಸೇವಾ ಪರಿಷತ್ ಮಹಾಮಂಡಲ ಪುತ್ತೂರು ಇದರ ವತಿಯಿಂದ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಏಪ್ರಿಲ್ 27ರಂದು ನಡೆಯಲಿರುವ ವಾಸ್ತು ಬಗ್ಗೆ ಚಿಂತನ – ಮಂಥನ 2025ರ ಪೂರ್ವಭಾವಿ ಸಭೆ ಏ.22ರಂದು ಬೊಳುವಾರಿನಲ್ಲಿ ನಡೆಯಿತು.
ಮಹಾಮಂಡಲದ ಅಧ್ಯಕ್ಷ ವಿ. ಪುರುಷೋತ್ತಮ ಆಚಾರ್ಯ ಅವರು ವಾಸ್ತು ಬಗ್ಗೆ ಚಿಂತನ – ಮಂಥನ ಕಾರ್ಯಕ್ರಮದ ಮಾಹಿತಿ ನೀಡಿ, ಬೆಳಿಗ್ಗೆ 10 ಗಂಟೆಗೆ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ಸಂಪನ್ಮೂಲ ವ್ಯಕ್ತಿಯಾಗಿರುವ ವಾಸ್ತು ತಜ್ಞ ಎನ್. ಹರಿಶ್ಚಂದ್ರ ಆಚಾರ್ಯ ನೆಟ್ಟಣಿಗೆ ಅವರು ವಾಸ್ತುವಿನ ಬಗ್ಗೆ ಮಾಹಿತಿ ನೀಡಲಿದ್ದಾರೆ. ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಪ್ರಧಾನ ಕಾರ್ಯದರ್ಶಿ ವೇ.ಮೂ. ಐ. ಲೋಲಾಕ್ಷ ಶರ್ಮ ಉಪಸ್ಥಿತರಿರುವರು. ಸಮಾಜಬಾಂಧವರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು.
ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ್ ಆಚಾರ್ಯ ಕೆ., ವಿಶ್ವಕರ್ಮ ಯುವ ಸಮಾಜ ಅಧ್ಯಕ್ಷ ಪ್ರಕಾಶ್ ಆಚಾರ್ಯ ಕೆ., ದ.ಕ. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ಅಧ್ಯಕ್ಷ ಸುರೇಂದ್ರ ಆಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ನಿರಂಜನ ಆಚಾರ್ಯ ಮರೀಲು ಸ್ವಾಗತಿಸಿದರು. ಜಯಪ್ರಕಾಶ್ ಕುಡ್ಚಿಲ ವಂದಿಸಿದರು.