ಬಡಗನ್ನೂರು: ಅಪಘಾತಕ್ಕೆ ಆಹ್ವಾನಿಸುವ ರಸ್ತೆ – ದುರಸ್ಥಿಗೆ ಸಾರ್ವಜನಿಕರ ಆಗ್ರಹ

0

ಬಡಗನ್ನೂರು: ಮುಡಿಪಿನಡ್ಕ -ಸುಳ್ಯಪದವು ಲೋಕೋಪಯೋಗಿ ರಸ್ತೆಯ ಕೊೖಲ ಅಪಾಯಕಾರಿ ತಿರುವು ಬಳಿ ರಸ್ತೆಯ ಇಕ್ಕಲಗಳಲ್ಲಿ ಹೊಂಡ ಬಿದ್ದು ವಾಹನ ಸಂಚಾರಕ್ಕೆ ಸಂಕಷ್ಟ ಎದುರಿಸುವ ಪರಿಸ್ಥಿತಿ ಉಂಟಾಗಿದ್ದು ಅಪಘಾತ ಸಂಭವಿಸುವ ಮುನ್ನ ರಸ್ತೆ ದುರಸ್ತಿ ಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅಗಲ ಕಿರಿದಾದ ರಸ್ತೆ
ಮುಡಿಪಿನಡ್ಕ-ಸುಳ್ಳಪದವು ರಸ್ತೆಯ ಮುಡಿಪಿನಡ್ಕ- ಪೇರಾಲು ನಡುವಿನ ಸುಮಾರು 1.5 ಕೀ ಮೀ ಅಗಲ ಕಿರಿದಾದ ರಸ್ತೆಯಾಗಿದ್ದು  ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕಿ ಶಕುಂತಲಾ ಟಿ ಶೆಟ್ಟಿ ಅವಧಿಯಲ್ಲಿ ಒನ್ ಟೖೆಮ್ ಯೋಜನೆಯಲ್ಲಿ ಈ ರಸ್ತೆ ಅಭಿವೃದ್ಧಿ ಪಡಿಸಲಾಗಿತ್ತು. ತದನಂತರ ಒಂದು ವರ್ಷದ ಬಳಿಕ ಜಿ. ಪಂ ರಸ್ತೆ ಮೇಲ್ಧರ್ಜೆಗೇರಿಸಿ ಲೋಕೋಪಯೋಗಿ ರಸ್ತೆಯಾಗಿ ಪರಿವರ್ತನೆಗೊಂಡಿತು.

ಆ ಬಳಿಕ ಲೋಕೋಪಯೋಗಿ ಇಲಾಖೆ ವತಿಯಿಂದ ಮಳೆಗಾಲದಲ್ಲಿ ಚರಂಡಿ ದುರಸ್ಥಿ  ಬಿಟ್ಟರೆ ಉಳಿದಂತೆ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿನಗಳು ಗಮನಿಸಿ ಮುಡಿಪಿನಡ್ಕದಿಂದ ಪೇರಾಲು ವರೆಗಿನ ಸುಮಾರು 1.5 ಕಿ. ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿರುತ್ತಾರೆ.

LEAVE A REPLY

Please enter your comment!
Please enter your name here