ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವತಿಯಿಂದ ಈ ವರ್ಷದ ಹಜ್ ಯಾತ್ರೆಗೆ ಹೊರಟ ಯಾತ್ರಿಕರಿಗಾಗಿ ಹಜ್ ತರಗತಿ ಎ.29ರಂದು ನೇರಳಕಟ್ಟೆ ಇಂಡಿಯನ್ ಅಡಿಟೋರಿಯಂನಲ್ಲಿ ನಡೆಯಲಿದೆ.
ದ.ಕ ಕನ್ನಡದಿಂದ ಈ ಬಾರಿ ಸಾವಿರಕ್ಕೂ ಅಧಿಕ ಪುರುಷ, ಮಹಿಳೆಯರು ಹಜ್ ಗೆ ತೆರಳುತ್ತಿದ್ದು ಜನ ಜಂಗುಳಿಯ ಮಧ್ಯೆ ಹಜ್ ಕರ್ಮಗಳ ಅನುಷ್ಠಾನ ಸುಲಭವಾಗಿ ಅದರ ಕ್ರಮದಂತೆ ನಿರ್ವಹಿಸಲು ಮಾಡಬೇಕಾದ ವಿಚಾರಗಳು ಹಲವು ಟಿಪ್ಸ್ ಗಳು ಮತ್ತು ಸಾಂದರ್ಭಿಕ ವಿಚಾರಗಳಲ್ಲಿ ಮಾತನಾಡಲಿದ್ದಾರೆ.
ಬೆಳಿಗ್ಗೆ 9 ಗಂಟೆಯಿಂದ ಅಪರಾಹ್ನ 2 ರ ತನಕ ಪ್ರಾಕ್ಟಿಕಲ್ ಆಗಿಯೂ ಕ್ಲಾಸ್ ನಡೆಯಲಿದ್ದು ಕಾಬಾ ಮಾದರಿ ಪ್ರದರ್ಶಿಸಿ ಅತ್ಯಂತ ಮನೋಹರವಾಗಿ ತರಗತಿ ನಡೆಯಲಿದೆ.
ಕೇರಳದಲ್ಲಿ ಪ್ರತೀ ವರ್ಷ ಕುಟ್ಯಾಡಿ ಸಿರಾಜುಲ್ ಹುದಾದಲ್ಲಿ ಅತ್ಯಂತ ದೊಡ್ಡ ಹಜ್ ಕ್ಲಾಸ್ ಪೇರೋಡ್ ಉಸ್ತಾದ್ ರವರಿಂದ ನಡೆಯುತ್ತಿದ್ದು ಸಾವಿರಾರು ಮಂದಿ ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ.
ಮರ್ಕಝುಲ್ ಹುದಾ ಮಹಿಳಾ ಕಾಲೇಜು ಹಜ್ ಯಾತ್ರಿಕರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ವನ್ನು ಸಂಘಟಿಸಿದ್ದು ಹಜ್ ಗೆ ಹೊರಡುವ ಎಲ್ಲಾ ಸ್ತ್ರೀ ಪುರುಷರು ಇದರ ಪ್ರಯೋಜನ ವನ್ನು ಪಡೆಯಬೇಕಾಗಿ ಮೀಡಿಯಾ ಮರ್ಕಝ್ ಕುಂಬ್ರ ಪ್ರಕಟಣೆಯಲ್ಲಿ ತಿಳಿಸಿದೆ.