*ಅದನ್ನು ಮಾಡಿದ ಉಗ್ರಗಾಮಿಗಳಿಗೆ ಮರಣ ದಂಡನೆ ಶಿಕ್ಷೆಯಾಗಬೇಕು
*ಆ ಘಟನೆ ನಮ್ಮಲ್ಲಿ ಒಡಕನ್ನು ತಾರದೆ ಒಗ್ಗಟ್ಟಿಗೆ ಕಾರಣವಾಗಬೇಕು
*ಧರ್ಮಗಳು ಮಾನ ವೀಯತೆಯನ್ನು ಸಾರಬೇಕು. ರಾಜಕೀಯ ನ್ಯಾಯದ ವ್ಯವಸ್ಥೆಗೆ ಪೂರಕ ನಡೆಯಾಗಬೇಕೆ ಹೊರತು ಜನರನ್ನು ಒಡೆದು ಲಾಭ ಪಡೆಯುವ ನಡೆಯಾಗ ಬಾರದು

ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ 28 ಜನರ ನರಮೇಧ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಮಾನವ ಮುಂದುವರಿದಷ್ಟು ಕೆಲವರು ಕ್ರೂರತೆಗೆ ಹಿಂತಿರುಗುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಹತ್ಯೆ ಮಾಡುವುದು, ಸಣ್ಣ ಸಣ್ಣ ಮಕ್ಕಳನ್ನು ರೇಪ್ ಮಾಡುವುದು, ಕ್ಷುಲ್ಲಕ ಕಾರಣಕ್ಕೆ ಭೀಕರವಾಗಿ ಪೀಸ್ ಪೀಸ್ ಮಾಡಿ ಕೊಲೆ ಮಾಡುವುದು, ಅದನ್ನು ಆನಂದಿಸುವುದು ಮನುಷ್ಯ ಮಾನವೀಯತೆಯನ್ನು ಮರೆತು ಪ್ರಾಣಿಗಿಂತ ಕ್ರೂರವಾಗಿ ಬದುಕುತ್ತಿದ್ದಾನೆ ಎಂಬುವುದಕ್ಕೆ ಉತ್ತಮ ಸಾಕ್ಷಿಯಾಗಿದೆ. ಅಂತಹ ವ್ಯಕ್ತಿಗಳಿಗೆ ಮರಣ ದಂಡನೆಯೇ ಶಿಕ್ಷೆಯಾಗಬೇಕು. ಇಲ್ಲದಿದ್ದರೆ ತಾವು ಮಾಡುತ್ತಿರುವುದು ಒಳ್ಳೆಯ ಕೆಲಸ ಎಂಬ ಭ್ರಮೆಯಿಂದ ಅವರು ಇನ್ನೂ ಹೆಚ್ಚು ಅಂತಹ ಕೆಲಸಗಳನ್ನು ಮಾಡಬಹುದು.
ಪುತ್ತೂರಿನಲ್ಲಿ ಜನತೆ ಈ ಭೀಕರ ಅಘಾತಕ್ಕೆ ತೀವ್ರವಾಗಿ ಸ್ಪಂಧಿಸಿ, ಖಂಡಿಸಿದ್ದಾರೆ. ಶೋಕಾಚರಣೆ, ಪ್ರತಿಭಟನೆ ನಡೆಸಿದ್ದಾರೆ. ಅಂತಹ ಘಟನೆಗಳು ನಮ್ಮಲ್ಲಿ ಒಡಕನ್ನು ಉಂಟು ಮಾಡದೆ ಒಗ್ಗಟ್ಟನ್ನು ಉಂಟು ಮಾಡಬೇಕು. ಧರ್ಮಗಳು ಮಾನವೀಯತೆಯನ್ನು ಸಾರಬೇಕು. ರಾಜಕೀಯ ನ್ಯಾಯದ ವ್ಯವಸ್ಥೆಗೆ ಪೂರಕ ನಡೆಯಾಗಬೇಕೆ ಹೊರತು ಜನರನ್ನು ಒಡೆದು ಲಾಭ ಪಡೆಯುವ ನಡೆಯಾಗಬಾರದು. ಇಲ್ಲಿ ಅಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಗೆ ಸಹಕಾರಿಯಾಗಲಿ ಎಂದು ಆಶಿಸುತ್ತೇನೆ.
| ಡಾ.ಯು.ಪಿ.ಶಿವಾನಂದ