ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆಯ ತನಕ ನಿತ್ಯ ರಾತ್ರಿಯ ಪೂಜೆಯ ಬಳಿಕ ವಸಂತ ಕಟ್ಟೆಯಲ್ಲಿ ವಸಂತ ಪೂಜೆ ನಡೆಯಲಿದೆ.
ಜಾತ್ರೆ ಮುಗಿದ ಬಳಿಕ ಪೂರ್ವಶಿಷ್ಟ ಸಂಪ್ರದಾಯದಂತೆ ವಸಂತಕಟ್ಟೆಯಲ್ಲಿ ವಸಂತ ಪೂಜೆ ನಡೆಯುತ್ತಿದೆ. ರಾತ್ರಿ ಪೂಜೆಯ ಬಳಿಕ ಶ್ರೀ ದೇವರ ನಿತ್ಯ ಬಲಿಯ ಸಂದರ್ಭ ಶ್ರೀ ದೇವರನ್ನು ವಸಂತ ಕಟ್ಟೆಯಲ್ಲಿರುವ ತೊಟ್ಟಿಲಲ್ಲಿಟ್ಟು ಶ್ರೀ ದೇವರ ಪೂಜೆ ನಡೆಯಲಿದೆ.
ವಸಂತ ಪೂಜಾ ಸೇವೆಗೆ ಅವಕಾಶ
ಪತ್ತನಾಜೆಯ ತನಕ ದೇವಳದಲ್ಲಿ ನಿತ್ಯ ನಡೆಯುವ ವಿಶೇಷ ವಸಂತ ಪೂಜೆಯ ಸೇವೆಗೆ ಭಕ್ತರಿಗೆ ಅವಕಾಶವಿದೆ. ಪೂಜಾ ಸೇವೆ ಮಾಡಿಸುವ ಭಕ್ತರು ದೇವಳದಲ್ಲಿ ಸೇವಾ ರಶೀದಿಯನ್ನು ಪಡೆಯುಂತೆ ವಿನಂತಿ.
ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು