ಪುತ್ತೂರು: ಮಹಾಲಸ ಆರ್ಕೇಡ್‌ನ ಮಾಲಕ ಬನ್ನೂರು ನಿವಾಸಿ ರವೀಶ್ ಪೈ(51ವ)ರವರು ಏ.29ರಂದು ಸಂಜೆ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ರವೀಶ್ ಪೈ ಅವರು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು.
ಮೃತರು ತಂದೆ ಶೇಷಗಿರಿ ಪೈ, ಪತ್ನಿ, ಪುತ್ರ, ಸಹೋದರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಏ.೩೦ರಂದು ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ.