ಅಕ್ಷಯವಾಗಲಿ ಬದುಕಿನ ಸಂತಸ

0

ಉತ್ತಮ ದಿನ ಒಳ್ಳೆಯ ಕೆಲಸ ಮನಸಿಟ್ಟು ಮಾಡು ಜೀವನದುದ್ದಕ್ಕೂ ಒಳ್ಳೇದೇ ಆಗುತ್ತದೆ ಇದು ಗುರು, ಹಿರಿಯರು ಹೇಳಿದ ನುಡಿ. ಬದುಕಲ್ಲಿ ಮಾನವನಾಗಿ ಹುಟ್ಟಿ ಸಮಾಜದಲ್ಲಿ ಒಂದು ಉತ್ತಮ ರೀತಿಯಲ್ಲಿ ಬದುಕಿ ಸಾರ್ಥಕತೆಯನ್ನ ಪಡೆಯಬೇಕು.
ಜೀವನದಲ್ಲಿ ತಪ್ಪುಗಳು ಗೊತ್ತಿದ್ದೋ ಗೊತ್ತಿಲ್ಲಡೆಯೋ ನಡೆಯುತ್ತದೆ ಆದರೇ ಅದನ್ನ ತಿದ್ದಿ ಕೊಂಡು ಪುನಃ ಆ ತಪ್ಪನ್ನು ಮಾಡದೆ ನಡೆಯುದು ಧರ್ಮ.ಬದುಕಲ್ಲಿ ನಾವು ಒಳ್ಳೆಯ ಜೀವನ ನಡೆಸಿ ನಮ್ಮಿಂದ ಒಂದಷ್ಟು ಜನರಿಗೆ ಸಹಾಯ, ಸಹಕಾರ , ನೀಡಿ ಬದುಕಿದಾಗ ಬೆಳಕಿನ ಹೊಂಕಿರಣ ನಮ್ಮೊಂದಿಗೆ ನಮ್ಮವರಿಗೂ ಬಾಳಲ್ಲಿ ಸಿಗುವಂತೆ ಆಶೀರ್ವಾದ ಮಾಡುತ್ತಾನೆ ಭಗವಂತ. ಚಿಂತನೆ ಬಂದಾಗ ಹಾಗಾದರೆ ಅದನ್ನ ನಾವು ಯಾವಾಗ ಶುರು ಮಾಡಬೇಕು ಯೋಚಿಸಿದಾಗ ಒಳ್ಳೆ ದಿನ ಶುರು ಮಾಡಿದ್ರೆ ನಮ್ಮ ಚಂಚಲ ಮನಸ್ಸು ಭದ್ರ ವಾಗಿದ್ದು ಸದಾ ಒಳ್ಳೇದನ್ನೇ ಮಾಡಿಸುವ ಶಕ್ತಿ ಆ ದಿನದ ಮಹಿಮೆ ಎಂಬ ಒಂದು ಸಣ್ಣ ವಿಚಾರ ಬೇರೂರಿ ನಮ್ಮನ್ನ ಒಳ್ಳೆ ಕೆಲಸಕ್ಕೆ ಪ್ರಚೋದಿಸುತ್ತದೆ ಎಂಬ ನಂಬಿಕೆ ನಮ್ಮ ಸನಾತನ ಧರ್ಮದ್ದು,ಹಾಗಾಗಿ ಒಳ್ಳೆ ದಿನ ಚಿನ್ನ ಖರೀದಿ, ಭೂಮಿ ಖರೀದಿ, ಹೊಸ ವಿದ್ಯೆ ಕಲಿಯಲು, ಸಂಗೀತ, ನಾಟ್ಯ ಕಲಿಯಲು, ವಾಹನ ಖರೀದಿ, ವ್ಯವಹಾರ ಶುರು ಮಾಡಲು, ಕೃಷಿ ಕೆಲಸ ಪ್ರಾರಂಭ ಮಾಡಲು, ಬದುಕಲ್ಲಿ ಸಾಧನೆ ಮಾಡಲು ಈ ಅಕ್ಷಯ ತೃತೀಯ ದಿನ ಮುನ್ನುಡಿ ಹಾಡಿದ್ರೆ ಅದಕ್ಕೆ ಅಳಿವಿಲ್ಲ ಸದಾ ಯಶಸ್ಸು ಸಿಗುತ್ತದೆ ಎಂಬ ಭರವಸೆ, ಅಕ್ಷಯ ಅನ್ನುವ ಪದಕ್ಕೆ ಅದರದ್ದೇ ಆದ ಮಹತ್ವ ಇದೆ, ಇನ್ನು ಪುರಾಣ ದಲ್ಲಿ ಹಲವಾರು ವಿಷಯ ಗಳ,ನಿರ್ಧಾರಗಳನ್ನು ಇದೆ ದಿನ ಮಾಡಲಾಯಿತು ಎಂಬ ಪುರಾವೆ ಇದೆ,

ಈ ದಿನ ನಾವು ಏನೇನು ಶುಭ ಕಾರ್ಯ ಮಾಡಬಹುದು
1ಮನೆಯಲ್ಲಿ ನಿತ್ಯ ಮಾಡುವ ಪೂಜೆ, ದೇವರಿಗೆ ನಮನ ಸ್ವಲ್ಪ ವಿಶೇಷವಾಗಿ ಸಲ್ಲಿಸುದು
2ದೇವರಿಗೆ ಪ್ರಿಯವಾದ ಅಭಿಷೇಕ, ಅರ್ಚನೆ, ದೇವರ ವರ್ಣನೆಯ ಕಾವ್ಯ, ಸ್ತೋತ್ರ ಓದುದು
3 ವಿಷೇಶ ಅಡುಗೆ ಮಾಡಿ ಮನೆ ಮಂದಿ ಎಲ್ಲ ಒಟ್ಟಿಗೆ ಕುಳಿತು ಊಟ ಮಾಡುದು
4 ಮನೆಯವರ ಜೊತೆ ಅವರಿಗೆ ಇಷ್ಟ ಆದ ವಿಚಾರಗಳನ್ನು, ಕೆಲಸಗಳನ್ನು ಪರಸ್ಪರ ಸಹಕಾರದಿಂದ ಜೊತೆಗೂಡಿ ನಡೆಸುದು ಇದರಿಂದ ಮನೆಯರ ಬಂಧನ ಜಾಸ್ತಿ ಆಗುತ್ತದೆ,
5 ಮನೆಯಲ್ಲೇ ಬೇಡದ ವಸ್ತುಗಳನ್ನು, ಅನಗತ್ಯ ವಸ್ತುಗಳನ್ನು ಭೂಮಿಗೆ ಭಾರ ಆಗದಂತೆ ವಿಸರ್ಜಿಸಿ ಅಗತ್ಯ ವಸ್ತುಗಳನ್ನು ಮನೆತುಂಬಿಸಿ ಸಂಭ್ರಮಿಸಿ
6 ಮಾತು, ವೃತ್ತಿ ನಿರ್ವಹಣೆ, ಮನಸ್ಸಿಟ್ಟು ಮಾಡಿ
7 ನಿಮ್ಮ ಆಪ್ತರಲ್ಲಿ, ಹಿರಿಯರಲ್ಲಿ ಮಾತಾಡಿ ಸಿಹಿ ಹಂಚಿ, ದಿನದ ಸಮಯವನ್ನು ಉತ್ತಮ ರೀತಿಯಲ್ಲಿ ಕಳೆಯಿರಿ,.
8 ಮನೆಯಲ್ಲಿ ಮಕ್ಕಳ ಜೊತೆಗೆ ಗಿಡಗಳನ್ನು ನೆಡಬಹುದು
9 ಚಿನ್ನ, ಬಟ್ಟೆ, ಭೂಮಿ ಖರೀದಿ ಮಾಡಬಹುದು, ಮನೆ ಮಂದಿ ಎಲ್ಲ ಸೇರಿ ನಾವು ಖರೀದಿ ಮಾಡಿದ್ದನ್ನು
ಸ್ಪರ್ಶದ ಮೂಲಕ, ತೋರಿಸುದರ ಮೂಲಕ ಸಂಭ್ರಮದಿಂದ ಇರಬಹುದು
ಇದರಿಂದ ನಾವು ಏನೋ ಸಾಧನೆ ಮಾಡಿದ ತೃಪ್ತಿ ಬಂದು ಜೀವನ ಉತ್ತಮವಾಗುತ್ತದೆ
10 ಮನಸ್ಸು ಹಗುರ ಆಗುವ, ಮನಸಿಗೆ ಸಂತೋಷ ಆಗುವ ಪುಸ್ತಕ ಓದುದು, ಒಟ್ಟಿನಲ್ಲಿ ನಮ್ಮ ಜೀವನ ಕ್ಕೆ ಬೇಕದ ಉತ್ತಮ ವಿಚಾರಗಳನ್ನು ಉತ್ತಮ ದಿನದಲ್ಲಿ ಅಭ್ಯಾಸ ಪ್ರಾರಂಭ ಮಾಡಿದಾಗ ಒಳ್ಳೆಯದಲ್ಲವೇ

ಲೇಖನ :ಕೃಷ್ಣ ವೇಣಿ ಪ್ರಸಾದ್ ಮುಳಿಯ
ಚಿತ್ರ ಕೃಪೆ ಮುಳಿಯ ಕೇಶವ ಭಟ್ ಅಂಡ್ ಸನ್ಸ್

LEAVE A REPLY

Please enter your comment!
Please enter your name here