ಪೆರಾಬೆ:SYS ಕುಂತೂರು ಯೂನಿಟ್ ಹಾಗೂ ಕುಂತೂರು ಗಲ್ಫ್ ಸಮಸ್ತ ಅಭಿಮಾನಿ ಬಳಗ ಸಹಯೋಗದಲ್ಲಿ ಕುಂತೂರು, ಕೋಚಕಟ್ಟೆ, ಸುರುಳಿ ಮೂರು ಮದ್ರಸದ ಸುಮಾರು 260ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಕಿತಾಬ್ ಹಾಗೂ ಓದುವ ಪುಸ್ತಕ ವಿತರಣಾ ಕಾರ್ಯಕ್ರಮ ಕುಂತೂರು H I ಮದ್ರಸ ಸಭಾಂಗಣದಲ್ಲಿ SYS ಕುಂತೂರು ಯೂನಿಟ್ ಇದರ ಅಧ್ಯಕ್ಷರಾದ ಜ/ಅಬ್ದುಲ್ಲಾ ಪಿ ಎ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸುರುಳಿ ಖತೀಬರಾದ ಬಹು/ಹಸೈನಾರ್ ಫೈಝಿ ಉದ್ಘಾಟನೆ ಕಾರ್ಯ ನೆರವೇರಿಸಿ ಮಾತನಾಡಿ, SYS ಕುಂತೂರು ಯೂನಿಟ್ ಉತ್ತಮ ಕಾರ್ಯವನ್ನು ಹಮ್ಮಿಕೊಂಡಿದ್ದು ಇಂತಹ ಕಾರ್ಯಕ್ರಮಗಳು ಪ್ರತಿಯೊಂದು ಜಮಾಹತಿನಲ್ಲಿ ಹಮ್ಮಿಕೊಂಡು ಆರ್ಥಿಕವಾಗಿ ಹಿಂದುಳಿದ ಮಕ್ಕಳ ಧಾರ್ಮಿಕ ಹಾಗೂ ಲೌಕಿಕ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ಸಮಾಜದಲ್ಲಿ ಮುಂದೆ ಬರುವ ಕೆಲಸ ನಡೆಯಬೇಕು ಹೇಳಿದರು.
ಕುಂತೂರು H I ಮದ್ರಸ ಪ್ರಧಾನ ಅಧ್ಯಾಪಕ ಹಾಶೀಂ ರಹ್ಮಾನಿ ಪ್ರಾಸ್ತಾವಿಕ ಭಾಷಣ ಮಾಡಿದರು.ಕೋಚಕಟ್ಟೆ ಮದ್ರಸ ಅಧ್ಯಾಪಕ ಫಾರೂಕ್ ದಾರಿಮಿ ಹಾಗೂ ಕುಂತೂರು ಮಾಜಿ ಅಧ್ಯಕ್ಷ ಅನೀಸ್ ನೂಜಿಲ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಹಿಸಿದರು.
ಈ ವರ್ಷ ಕುಟುಂಬ ಸಮೇತ ಪವಿತ್ರ ಹಜ್ಜ್ ನಿರ್ವಹಿಸಲು ತೆರಳುತ್ತಿರುವ SYS ಯೂನಿಟ್ ಇದರ ಅಧ್ಯಕ್ಷ ಅಬ್ದುಲ್ಲಾ ಪಿ ಎ ಇವರಿಗೆ ಯೂನಿಟ್ ವತಿಯಿಂದ ಶಾಲು ಹೊದಿಸಿ ಬಿಳ್ಕೊಡುಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಕುಂತೂರು ಜಮಾಹತ್ ಅಧ್ಯಕ್ಷ ಹಸೈನಾರ್ ಹಾಜಿ, ಮಾಜಿ ಅಧ್ಯಕ್ಷ ಇಬ್ರಾಹಿಂ ಕಜೆ, ಅಬ್ಬಾಸ್ KSRTC,ಜಮಾಹತ್ ಉಪಾಧ್ಯಕ್ಷ ಅಯ್ಶೂಭ್ KSRTC, ಕೋಶಾಧಿಕಾರಿ ಅಬ್ದುಲ್ಲಾ ಮಡಿಪಿನಡ್ಕ, ಕಾರ್ಯದರ್ಶಿ ಯಾಕೂಬ್ ಕೆ.ಕೋಚಕಟ್ಟೆ, ಮದ್ರಸ ಅಧ್ಯಕ್ಷ ಹಮೀದ್ ಅಜ್ಮೀರ್, ಮಾಜಿ ಅಧ್ಯಕ್ಷ ಇಸ್ಮಾಯಿಲ್ ಅಲ್ ಅಮೀನ್, ಬಷೀರ್ ಕೆ ಪಿ, ಅಬೂಬಕ್ಕರ್ ಸುರುಳಿ, SYS ಕೋಶಾಧಿಕಾರಿ ಯೂಸೂಫ್ ಏರ್ಮಲಾ, ಕೋಚಕಟ್ಟೆ ಮದ್ರಸ ಕಾರ್ಯದರ್ಶಿ ಸಿದ್ದೀಕ್ ಅಲ್ ಅಮೀನ್, ಹಾಗೂ ಕುಂತೂರು ಮದ್ರಸ ಅಧ್ಯಾಪಕ ವೃಂದ, ಜಮಾಹತ್ ಹಲವಾರು ಸದಸ್ಯರು, SYS ಯೂನಿಟ್ ಇದರ ಪದಾಧಿಕಾರಿಗಳು, SKSSF ಕುಂತೂರು ಶಾಖಾ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.
SYS ಯೂನಿಟ್ ಇದರ ಪ್ರಧಾನ ಕಾರ್ಯದರ್ಶಿ ಶರೀಫ್ ಮಶ್ರೀಕ್ ಸ್ವಾಗತಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಅನ್ನಡ್ಕ ಫ್ಯಾಮಿಲಿ ವತಿಯಿಂದ ಲಘು ಉಪಹಾರ ನೀಡಿದರು