ಸಂಟ್ಯಾರ್: ಸರಣಿ ಅಪಘಾತ- ಅಪಾಯದಿಂದ ಪಾರು

0

ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಟ್ಯಾರ್ ಜಂಕ್ಷನ್ ನಲ್ಲಿ ಕೆ.ಎಸ್.‌ಆರ್‌.ಟಿ.ಸಿ ಬಸ್, ಮಾರುತಿ ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ ಸಂಭವಿಸಿದೆ.


ಪುತ್ತೂರಿನಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕೆ.ಎಸ್.‌ಆರ್‌.ಟಿ.ಸಿ ಬಸ್ ಸಂಟ್ಯಾರ್ ಜಂಕ್ಷನ್ ನಲ್ಲಿ ರಸ್ತೆ ಬದಿ‌ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುತ್ತಿರುವ ಸಂದರ್ಭದಲ್ಲಿ ಪಾಣಾಜೆ ಕಡೆಯಿಂದ‌ ಬಂದ‌ ಮಾರುತಿ(ಕೆಎ03ಎಂ.ಬಿ6672) ಎದುರಿನಿಂದ ಬಂದ ಸುಝುಕಿ ಎಕ್ಸಸ್(ಕೆಎ21ಇಬಿ4576) ಡಿಕ್ಕಿ ಹೊಡೆದು ಎದುರಿನಿಂದ ಬಂದ ಬಜಾಜ್ ಪಲ್ಸರ್(ಕೆಎ21ವಿ5950) ಬೈಕ್‌ ಹಾಗೂ ಕೆ.ಎಸ್.‌ಆರ್‌.ಟಿ.ಸಿ ಬಸ್ ಗೆ ಡಿಕ್ಕಿ‌ ಹೊಡೆದಿದೆ. ಅಪಘಾತದಿಂದ ಸುಝುಕಿ ಎಕ್ಸಸ್,‌ಪಲ್ಸರ್ ಬೈಕ್ ಹಾಗೂ ಮಾರುತಿ 800 ನಜ್ಜು ಗುಜ್ಜಾಗಿದೆ. ಅಪಘಾತದಿಂದ ಯಾವುದೇ ಗಾಯಗಳಾಗಿರುವುದಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here