ಸರ್ಕಾರಿ ಪ್ರ.ದ ಮಹಿಳಾ ಕಾಲೇಜು, ಕರ್ನಾಟಕ ಗಾಂಧೀಜಿ ಸ್ಮಾರಕ ನಿಧಿ, ಗಾಂಧಿ ವಿಚಾರ ವೇದಿಕೆಯಿಂದ ಗಾಂಧಿ ಸಂವಾದ

0

ನೈತಿಕ ಅಧ:ಪತನವೇ ದೇಶದ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ-ರವಿಕೃಷ್ಣ ರೆಡ್ಡಿ

ಪುತ್ತೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿರವರು ಕನಸು ಕಂಡ ರಾಮರಾಜ್ಯ ನಮ್ಮ ದೇಶದಲ್ಲಿ ಬೆಳೆದು ಬಾರದೆ ಇಂದು ದೇಶ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರಲು ಮುಖ್ಯ ಕಾರಣವಾಗಿದ್ದು ನಮ್ಮ ನಮ್ಮ ನೈತಿಕ ಅಧಃಪತನ ಎಂದು ಪ್ರಖ್ಯಾತ ಭ್ರಷ್ಟಾಚಾರ ವಿರೋಧಿ ಹೋರಾಟಗಾರರಾದ ರವಿಕೃಷ್ಣ ರೆಡ್ಡಿರವರು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು, ಕರ್ನಾಟಕ ಗಾಂಧೀಜಿ ಸ್ಮಾರಕ ನಿಧಿ ಮತ್ತು ಗಾಂಧಿ ವಿಚಾರ ವೇದಿಕೆ ಇದರ ಆಶ್ರಯದಲ್ಲಿ ಎ.28ರಂದು ಜೈನ ಭವನದಲ್ಲಿ ನಡೆದ ಗಾಂಧಿ ಸಂವಾದ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡುತ್ತಿದ್ದರು. 

ಪ್ರಧಾನ ಉಪನ್ಯಾಸ ನೀಡಿದ ಚಿಂತಕ ಚಂದ್ರಣ್ಣ ಎಸ್ ಅವರು,  ಯುವಜನರು ತಮ್ಮ ಬದುಕಿನಲ್ಲಿ ಗಾಂಧೀಜಿಯವರ ಮೌಲ್ಯಗಳನ್ನು ಅನುಸರಿಸುತ್ತಾ ಯಶಸ್ವಿ ನಾಯಕತ್ವದತ್ತ ಸಾಗಬಹುದು ಎಂದು ಹೇಳಿದರು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಪುತ್ತೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಮಳ ರಾಮಚಂದ್ರರವರು ಮಾತನಾಡಿ, ವಿದ್ಯಾರ್ಥಿಗಳು ಗಾಂಧೀಜಿಯವರ ಬದುಕಿನ ಮೌಲ್ಯಗಳನ್ನು ಸ್ಪಷ್ಟವಾಗಿ ತಿಳಿದುಕೊಂಡು ಯಾವುದೇ ಒತ್ತಡಗಳಿಗೆ, ಆಮಿಷಗಳಿಗೆ ಬಲಿಯಾಗದೆ ಆ ಮೌಲ್ಯಗಳನ್ನು ಅನುಸರಿಸಿ ನ್ಯಾಯದ, ಸತ್ಯದ, ಮೌಲ್ಯಗಳ ನವಭಾರತವನ್ನು ನಿರ್ಮಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಗಾಂಧಿ ವಿಚಾರ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷರಾದ ಪ್ರೊ.ಝೇವಿಯರ್ ಡಿ’ಸೋಜಾರವರು ಮಾತನಾಡಿ, ಗಾಂಧೀಜಿಯವರು ಬದುಕಿದ ರೀತಿ ನಮಗೆಲ್ಲರಿಗೂ ಅನುಸರಣೆಯದು, ಅವರನ್ನು ಅನುಸರಿಸಿ ಮುಂದೆ ಹೋಗುವುದು ಅಸಾಧ್ಯವೇನಲ್ಲ ಎಂದರು. ಮುಖ್ಯ ಅತಿಥಿಗಳಾಗಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ ಗೋಪಾಲಕೃಷ್ಣರವರು ಮಾತನಾಡಿ, ಇಂದಿನ ಯುವ ಜನತೆ ಗಾಂಧೀಜಿಯವರ ಬದುಕಿನ ದಾರಿಯಲ್ಲಿ ಹಿಡಿಯುವುದು ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಾಗಿದೆ ಎಂದು ತಿಳಿಸಿದರು.

ಗಾಂಧಿಸ್ಪೃತಿ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗಾಂಧಿ ವಿಚಾರ ವೇದಿಕೆಯ ಆಡಳಿತಾಧಿಕಾರಿ ಭಾಗ್ಯೇಶ್ ರೈರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚಿನ್ಮಯ್ ಕೃಷ್ಣ ವಂದಿಸಿದರು. ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿಗಳು, ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು, ಸಾರ್ವಜನಿಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here