ಕುಂತೂರು ಪದವು ಅಂಗನವಾಡಿ ಕೇಂದ್ರದ ಸಹಾಯಕಿ ಯಮುನಾ ನಿವೃತ್ತಿ

0

ಪೆರಾಬೆ: ಕಡಬ ತಾಲೂಕಿನ ಕುಂತೂರು ಪದವು ಅಂಗನವಾಡಿ ಕೇಂದ್ರದ ಸಹಾಯಕಿ ಯಮುನಾ ಅವರು ಏ.30 ರಂದು ಸೇವೆಯಿಂದ ನಿವೃತ್ತರಾದರು.
ಯಮುನಾ ಅವರು 1-5-1996ರಂದು ಸೇವೆಗೆ ಸೇರ್ಪಡೆಗೊಂಡು ಸುದೀರ್ಘ 29 ವರ್ಷ ಸೇವೆ ಸಲ್ಲಿಸಿ 30-4-2025 ರಂದು ನಿವೃತ್ತಿಯಾದರು. ಇವರು ಮೂಲತಃ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ನಿವಾಸಿ ದಿ. ಸೋಮಪ್ಪ ಅವರ ಪತ್ನಿಯಾಗಿದ್ದು ಪ್ರಸ್ತುತ ಪುತ್ರ ಸಂತೋಷ್ ಡಿ., ಹಾಗೂ ಪುತ್ರಿ ತೃಪ್ತಿ ಡಿ., ಅವರೊಂದಿಗೆ ಕುಂತೂರುಪದವುನಲ್ಲಿ ವಾಸ್ತವ್ಯವಿದ್ದಾರೆ.

LEAVE A REPLY

Please enter your comment!
Please enter your name here