ವಿಟ್ಲದಲ್ಲಿ ಸ್ವಯಂಪ್ರೇರಿತ ಬಂದ್ – ಗ್ರಾಮೀಣ ಪ್ರದೇಶಗಳಲ್ಲಿ ಎಂದಿನಂತೆ ತೆರೆದ ಅಂಗಡಿ ಮುಂಗಟ್ಟು

0

ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಿಂದ ಬಿಗು ಬಂದೋಬಸ್ತ್

ವಿಟ್ಲ:ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಹತ್ಯೆಯನ್ನು ಖಂಡಿಸಿ ಮೇ.2ರಂದು ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯ ವರೆಗೆ ದಕ್ಷಿಣ ಕನ್ನಡ ಜಿಲ್ಲೆ ಬಂದ್ ಮಾಡುವಂತೆ ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದು, ಈ ಹಿನ್ನಲೆ ವಿಟ್ಲದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಆಗಿವೆ.

ಮೆಡಿಕಲ್, ಪತ್ರಿಕೆ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳು ಬೆಳಗ್ಗಿನ ವೇಳೆ ಎಂದಿನಂತೆ ತೆರೆದಿತ್ತು. ವಾಹನ ಸಂಚಾರಗಳು ವಿರಳವಾಗಿತ್ತು. ಬೆಳಗ್ಗಿನ‌ ವೇಳೆ ಸರಕಾರಿ ಬಸ್ಸುಗಳು ಸಂಚಾರ ನಡೆಸಿವೆಯಾದರೂ ಆ ಬಳಿಕ ಸ್ಥಗಿತಗೊಂಡಿದೆ. ಗಡಿಪ್ರದೇಶದಲ್ಲಿರುವ ಗ್ರಾಮೀಣ ಭಾಗದ ಅಂಗಡಿಗಳೆಲ್ಲಾ ಎಂದಿನಂತೆ ತೆರೆದು ವ್ಯವಹಾರ ನಡೆಸಿದೆ. ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್ . ಇ . ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ಎಲ್ಲೆಡೆ ಬಿಗು ಬಂದೋಬಸ್ತ್ ಏರ್ಪಡಿಸಿದೆ.

LEAVE A REPLY

Please enter your comment!
Please enter your name here