ಪುತ್ತೂರು: ಬ್ರಹ್ಮನಗರ ನಡುಮುಂದಿಲು ಶ್ರೀ ದುರ್ಗಾಮಾರಿಯಮ್ಮ ಸೇವಾ ಟ್ರಸ್ಟ್ ವತಿಯಿಂದ ವರ್ಷಂಪ್ರತಿ ನಡೆಯುವ ಶ್ರೀ ದುರ್ಗಾ ಮಾರಿಯಮ್ಮ ಮಹಾಪೂಜೆ, ಪರಿವಾರ ದೈವಗಳ ದರ್ಶನಕ್ಕೆ ಎ.29ರಂದು ಗೊನೆ ಮುಹೂರ್ತ ನಡೆಯಿತು.
ಸೇವಾ ಟ್ರಸ್ಟ್‌ನ ಅಧ್ಯಕ್ಷ ಅಶೋಕ ಪಿ.ಎಸ್, ಅರ್ಚಕರುಗಳಾದ ಕುಮಾರ, ಮೋಹನದಾಸ, ಪ್ರಧಾನ ಕಾರ್ಯದರ್ಶಿ ಸೋಮನಾಥ, ಸದಸ್ಯರುಗಳಾದ ಶೇಖರ, ಸುರೇಂದ್ರ, ಹರೀಶ್, ಮನೋಹರ, ಮಹೇಶ, ಪುನೀತ್, ರೋಹಿತ್ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.