ಆಲಂಕಾರು: ಹಿಂದೂ ಸಂಘಟನೆಯ ಪ್ರಮುಖ ಸುಹಾಸ್ ಶೆಟ್ಟಿಯ ಹತ್ಯೆ ಖಂಡಿಸಿ ಹಿಂದೂ ಪರ ಸಂಘಟನೆಗಳು ಬಂದ್ ಗೆ ಕರೆ ಕೊಟ್ಟಿರುವ ಹಿನ್ನಲೆಯಲ್ಲಿ ಆಲಂಕಾರು,ಕುಂತೂರು,ನೆಕ್ಕರೆ,ಗೋಳಿತ್ತಡಿ,ಗಣೇಶನಗರ ಹಾಗು ಇನ್ನೀತರ ಕಡೆಗಳಲ್ಲಿ ಬಂದ್ ಆಗಿತ್ತು.ಬೆಳಿಗ್ಗೆ ಎಂದಿನಂತೆ ಕೆಲವು ಅಂಗಡಿ ಮುಂಗಟ್ಟುಗಳು ತೆರೆದಿತ್ತು.ನಂತರ ಹಿಂದೂ ಪರ ಸಂಘಟನೆಗಳ ಮನವಿ ಮೆರೆಗೆ ಮೆಡಿಕಲ್, ಕ್ಲಿನಿಕ್ ಗಳನ್ನು ಬಿಟ್ಟು ಉಳಿದ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತರಾಗಿ ಬಂದ್ ನಡೆಸಿದ್ದಾರೆ.