ಪುತ್ತೂರು: ಮಾರ್ಚ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಚಿನ್ಮಯಿ.ಎಲ್. 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರು ಪುತ್ತೂರಿನ ಖ್ಯಾತ ದಂತವೈದ್ಯ ದಂಪತಿಗಳಾದ ಡಾ.ಎಲ್.ಕೃಷ್ಣ ಪ್ರಸಾದ್ ಮತ್ತು ಡಾ.ಅಮೃತ ಪ್ರಸಾದ್ ಇವರ ಸುಪುತ್ರಿ.
ಉಮೇಶ.ಪಿ ಮತ್ತು ವಾರಿಜ ದಂಪತಿ ಪುತ್ರಿಯಾದ ಮಾನ್ಯ.ಎಂ -623, ಗಣೇಶ ಭಟ್.ಸಿ.ಎಚ್ ಮತ್ತು ರವಿಕಲಾ.ಕೆ ದಂಪತಿ ಪುತ್ರ ಶ್ರೀಜಿತ್.ಸಿ.ಎಚ್-621, ಡಾ.ಗುರುರಾಜ.ಎಂ.ಪಿ ಮತ್ತು ಡಾ.ಶ್ರೀದೇವಿ ದಂಪತಿ ಪುತ್ರಿ ಸಮನ್ವಿತಾ.ಎ.ಭಟ್-621 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಒಟ್ಟು 243 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ 243 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ 100% ಫಲಿತಾಂಶವನ್ನು ತಂದಿರುತ್ತಾರೆ. ಹಾಜರಾದ ವಿದ್ಯಾರ್ಥಿಗಳಲ್ಲಿ 50% ವಿದ್ಯಾರ್ಥಿಗಳು (121 ಮಂದಿ) ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 49 ಮಂದಿ ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುವುದು ಸಂಸ್ಥೆಯು ನೀಡುತ್ತಿರುವ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿರುತ್ತದೆ.