ಕಾವು: ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾದ 26 ವಿದ್ಯಾರ್ಥಿಗಳ ಪೈಕಿ 24 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇಕಡ 92.83 ಫಲಿತಾಂಶ ಲಭಿಸಿದೆ. ಮೂರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉಳಿದ 23 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಶಿಷ್ಟ ಶ್ರೇಣಿಯ ಸಾಧಕರು
ಹರ್ಷಲ್ ಎಂಎಸ್- 614 /98.32% ಇವರು ಕೌಡಿಚ್ಚಾರ್ ಆಚಾರಿ ಮೂಲೆಯ ಸಾಂತಪ್ಪ ಗೌಡ ಮತ್ತು ಬೇಬಿ ದಂಪತಿಯ ಪುತ್ರನಾಗಿದ್ದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಉಳಿದಂತೆ ಶೈಮ 589/625 ಇವರು ಬಂಗ್ಲ ಗುಡ್ಡೆ ಕಾವು ಕಲಂದರ್ ಶಾಫಿ ಮತ್ತು ಮರಿಯಮ್ಮ ದಂಪತಿಗಳ ಪುತ್ರಿ , ಮುಶೈನಾ 546 /625 ಇವರು ನೆಟ್ಟರು ಮೊೖದೀನ್ ಮತ್ತು ಅಸ್ಮಾ ದಂಪತಿಗಳ ಪುತ್ರಿ, ಸಫಾ ಫಾತಿಮ 510 / 625 ಇವರು ಕಾವು ಮಂಜ ಕೊಟ್ಯಾ ಬಿ ಕೆ ಫಾಝಿಯಾ ಮತ್ತು ಲೇಟ್ ಶಾಹಿಲ್ ಹಮೀದ್ ಇವರ ಪುತ್ರಿ, ಫಾತಿಮಾ ಎ ಎ 507/625 ಇವರು ಅಡ್ಕಾರ್ ಅಬ್ದುಲ್ಲಾ ಮತ್ತು ಅಸ್ಮ ದಂಪತಿಗಳ ಪುತ್ರಿ, ನಶ್ವಿಫಾ 505/625 ಇವರು ಕುಂಬ್ರ ಉಜಿರೋಡಿ ಮಹಮ್ಮದ್ ಮತ್ತು ನಸೀಮಾ ದಂಪತಿಗಳ ಪುತ್ರಿ ಇವರುಗಳು ಮತ್ತು ಉಳಿದಂತೆ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ.
ಸಾಧಕ ವಿದ್ಯಾರ್ಥಿಗಳನ್ನು ಮತ್ತು ಬೋಧಕ ವರ್ಗ ಸಿಬ್ಬಂದಿಗಳನ್ನು ಅಧ್ಯಕ್ಷ ಅಬ್ದುಲ್ ಅಝೀಝ್ ಮತ್ತು ಆಡಳಿತ ನಿರ್ದೇಶಕರಾದ ಬದ್ರುದ್ದಿನ್ ಇವರು ಅಭಿನಂದಿಸಿದ್ದಾರೆ ಎಂದು ಮುಖ್ಯೋಪಾಧ್ಯಾಯನಿ ದೀಪಿಕಾ ಚಾಕೋಟೆ ಇವರು ತಿಳಿಸಿದ್ದಾರೆ.