ನಿಡ್ಪಳ್ಳಿ; 2024- 2025 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆ ಸತತ ಮೂರನೇ ಬಾರಿಗೆ 100% ಫಲಿತಾಂಶವನ್ನು ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ 07 ವಿದ್ಯಾರ್ಥಿಗಳಲ್ಲಿ 03 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 02 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 02 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯೊಂದಿಗೆ ಉತ್ತೀರ್ಣ ರಾಗಿರುತ್ತಾರೆ. ದೀಪಕ್ ರಾಜ್ 591 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ. ಉಳಿದಂತೆ ಅವಿನಾಶ್ 583, ಅಂಕಿತಾ ಸಿ.ಎಚ್ 572 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯನ್ನು ಪಡೆದು ಕೊಂಡಿರುತ್ತಾರೆ ಎಂದು ಶಾಲಾ ಮುಖ್ಯ ಗುರು ವಿಜಯಕುಮಾರ್ ತಿಳಿಸಿದ್ದಾರೆ.