ಪಾಣಾಜೆ ಸುಬೋಧ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

0

ನಿಡ್ಪಳ್ಳಿ: ಪಾಣಾಜೆ ಸುಬೋಧ ಪ್ರೌಢಶಾಲೆಗೆ 2024- 25 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಬಂದಿರುತ್ತದೆ.

ಪರೀಕ್ಷೆಗೆ 30 ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ 7 ಮಂದಿ ಡಿಸ್ಟಿಂಕ್ಷನ್, ಪ್ರಥಮ ಶ್ರೇಣಿಯಲ್ಲಿ 18 ವಿದ್ಯಾರ್ಥಿಗಳು ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಸಂಚಾಲಕ ಮಹಾಬಲೇಶ್ವರ ಭಟ್ ಗಿಳಿಯಾಲು ತಿಳಿಸಿದ್ದಾರೆ.

ಡಿಸ್ಟಿಂಕ್ಷನ್ ಪಡೆದವರಲ್ಲಿ  ಸುಶ್ಮಿತಾ-(609) ಅಂಕ ಪಡೆದು ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದು ಕೊಂಡಿರುತ್ತಾಳೆ. ಇವಳು ಗುಡ್ಡೆಮನೆ ಆನಂದಿ ಈಶ್ವರ ನಾಯ್ಕರವರ ಪುತ್ರಿ.ತೃಪ್ತಿ (601)ಇವಳು ಪಿದಾರಮನೆ ನಳಿನಿ ರಾಧಾಕೃಷ್ಣ ಇವರ ಪುತ್ರಿ.ನೆಫೀಸತ್ ಮಶ್ ರೂಫ(593) ಇವಳು ಬೊಳ್ಳಿಂಬಳ ಅಬೀದಾ ಬಿ. ಅಬ್ದುಲ್ ರಜಾಕ್ ಇವರ ಪುತ್ರಿ. ರಚನಾ ಡಿ.ಎಸ್ (567) ಇವಳು ಗುವೆಲ್ ಗದ್ದೆ ಶಶಿಕಲಾ ದೇವಪ್ಪ ಮೂಲ್ಯ ಇವರ ಪುತ್ರಿ. ಪ್ರೀತಿಕಾ (552) ಇವರು ದೇವಸ್ಯ ಸರೋಜಿನಿ ಶ್ರೀಧರ ಡಿ ಇವರ ಪುತ್ರಿ. ಅನಘಶಂಕರಿ ಎಸ್.ಎಸ್ (548) ಇವರು ಪಾಲ್ತಮೂಲೆ ಮಾಲತಿ ಎಸ್ ಶಶಿಧರ ಎಸ್.ಕೆ ಇವರ ಪುತ್ರಿ. ತನ್ವಿ(533) ಇವಳು ಭರಣ್ಯ ಗೀತಾ ಕೊರಗಪ್ಪ ಇವರ ಪುತ್ರಿಯಾಗಿದ್ದಾಳೆ.

LEAVE A REPLY

Please enter your comment!
Please enter your name here