ಪುತ್ತೂರು: ಎ. 23ರಂದು ನಿಧನರಾದ ಮುಳಿಂಜಗುತ್ತು ವನಿತಾ ರೈ ಅಡ್ಯೆತ್ತಿಮಾರ್‌ರವರ ಉತ್ತರಕ್ರಿಯೆ ಮೇ.3ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರಭವನದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಜರಗಿದ ಶ್ರದ್ಧಾಂಜಲಿ ಕಾರ್‍ಯಕ್ರಮದಲ್ಲಿ ಗುರಿಕ್ಕಾರ ಕೇಪು ಬೆಂಗ್ರೋಡಿ ಬಾಲಕೃಷ್ಣ ಶೆಟ್ಟಿಯವರು ಮಾತನಾಡಿ ವನಿತಾ ರೈಯವರು ಆದರ್ಶ ಗೃಹಿಣಿಯಾಗಿ ಮನೆ ಮತ್ತು ಕುಟುಂಬ ಹಾಗೂ ಸಮಾಜದೊಂದಿಗೆ ಬಹಳ ಅಕ್ಕರೆಯಿಂದ ಬದುಕು ಸಾಗಿಸಿದ್ದಾರೆ. ಅವರು ತಮ್ಮ ಬದುಕಿನಲ್ಲಿ ಉತ್ತಮ ಆದರ್ಶಗಳನ್ನು ಅಳವಡಿಸಿಕೊಂಡಿದ್ದಾರೆ, ತನ್ನ ಮನೆ, ಬಂಧು-ಬಳಗ, ಕುಟುಂಬ, ಸಮಾಜವನ್ನು ಪ್ರೀತಿ-ವಾತ್ಯಲದಿಂದ ಕಾಣುತ್ತಿದ್ದರು. ಅವರ ಜೀವನ ನಮಗೆಲ್ಲ ಅನುಕರಣೀಯ ಎಂದು ಹೇಳಿ, ನುಡಿನಮನ ಸಲ್ಲಿಸಿದರು. ಸಾಮಾಜಿಕ ಮುಂದಾಳು ಅಮ್ಮು ಪೂಂಜರವರು ಕಾರ್‍ಯಕ್ರಮದಲ್ಲಿ ಸಹಕರಿಸಿದರು.
ಮುಳಿಂಜಗುತ್ತು ವನಿತಾ ರೈ ಅಡ್ಯೆತ್ತಿಮಾರ್‌ರವರ ಪತಿ ಕುರಿಕ್ಕಾರ ಬೈಂಕಿ ರೈ ಅಡ್ಯೆತ್ತಿಮಾರ್, ಮಕ್ಕಳಾದ ಮುಖೇಶ್ ರೈ ಅಡ್ಯೆತ್ತಿಮಾರ್, ಸ್ವಪ್ನ ರೈ, ಸೌಮ್ಯ ರೈ, ರಮ್ಯ ರೈ, ರಿತೇಶ್ ರೈ ಅಡ್ಯೆತ್ತಿಮಾರ್, ಅಳಿಯಂದಿರಾದ ಕೃಷ್ಣ ರೈ ನಾಕೂರು, ಶಶಿಧರ್ ರೈ ಬಜದಗುತ್ತು, ಕುರಿಕ್ಕಾರ ಶ್ರೀ ನಾಗೇಶ್ ರೈ ಕನ್ನಡಮೂಲೆ, ಸೊಸೆ ಪ್ರತಿಭಾ ರೈ ಹಾಗೂ ಮೊಮ್ಮಕ್ಕಳು ಮತ್ತು ಕುಟುಂಬಸೃರು, ಊರ-ಪರವೂರ ಬಂಧುಗಳು,ಹಿತೈಷಿಗಳು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಖಂಡರುಗಳು ಭಾಗವಹಿಸಿದರು.