ಪುತ್ತೂರು: ಮಂಗಳೂರು ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಗ್ರೀಷ್ಮ ಎನ್.ರವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 620 ಅಂಕ ಗಳಿಸಿ ರಾಜ್ಯದಲ್ಲಿ 6ನೇ ಸ್ಥಾನ ಪಡೆದಿದ್ದಾರೆ.
ಮುಂಡೂರು ಗ್ರಾಮದ ನಡುಬೈಲು ಗುತ್ತು ರಾಜೇಶ್ ಸಾಲ್ಯಾನ್ ಮತ್ತು ಪುಷ್ಪಾ ರಾಜೇಶ್ ಸಾಲ್ಯಾನ್ ದಂಪತಿ ಪುತ್ರಿಯಾದ ಇವರು ಶೈಕ್ಷಣಿಕ ಸಾಧನೆ ಮಾತ್ರವಲ್ಲದೆ ಸ್ಕೇಟಿಂಗ್‌ನಲ್ಲಿ ರಾಜ್ಯಮಟ್ಟದಲ್ಲಿ ಹಲವು ಬಹುಮಾನ ಗಳಿಸಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದಾರೆ.