ಪುತ್ತೂರು: ಸುಸ್ವರ ಮೆಲೋಡೀಸ್ ಉಪ್ಪಿನಂಗಡಿ ಇವರಿಂದ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಮೇ.6ರಂದು ಬೆಳಿಗ್ಗೆ ಭಕ್ತಿ ಭಾಗ ಗಾನ ಸಂಭ್ರಮ ನಡೆಯಲಿದೆ. ಬಿ.ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು ಸಾರಥ್ಯದಲ್ಲಿ ವೈಶಾಲಿ ಎಂ.ಕುಂದರ್ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಕಾರ್ಯಕ್ರಮದಲ್ಲಿ ಗಾಯಕರಾಗಿ ಕುಶಾಲಪ್ಪ ಉಪ್ಪಿನಂಗಡಿ, ಶಾರ್ವಿ ರೈ ನೀರ್ಪಾಡಿ, ಸ್ಮೃತಿ ಪಲ್ಲತ್ತಾರು, ಸ್ವಪ್ನ ಉಪ್ಪಿನಂಗಡಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಪ್ರಾಯೋಜಕರಾಗಿ ಪುತ್ತೂರು ಜನ್ಮ ಕ್ರಿಯೇಷನ್ಸ್ನ ಡಾ| ಹರ್ಷ ಕುಮಾರ್ ರೈ ಮಾಡಾವು ಮತ್ತು ಪುತ್ತೂರು ನ್ಯೂ ಮಾನಕ ಜ್ಯುವೆಲ್ಲರ್ಸ್ ಸಹಕರಿಸಲಿದ್ದಾರೆ ಎಂದು ಸುಸ್ವರದ ಬಿ.ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು ತಿಳಿಸಿದ್ದಾರೆ.