ಪುತ್ತೂರು: ಕನ್ನಡ ಚಲನಚಿತ್ರದ ಹಾಸ್ಯನಟ ಟೆನ್ನಿಸ್ ಕೃಷ್ಣ ಅವರು ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮೇ.5ರಂದು ಭೇಟಿ ನೀಡಿದರು.
ಕ್ಷೇತ್ರ ದರ್ಶನಕ್ಕೆ ಬಂದ ಅವರು ಮುತ್ತು ಬೆಳೆದ ಊರೆಂದು ಖ್ಯಾತಿ ಪಡೆದ ದೇವಸ್ಥಾನದಲ್ಲಿ ಶ್ರೀ ದೇವರ ದರುಶನ ಪಡೆಯಬೇಕೆಂಬ ಹಂಬಲದಿಂದ ಬೆಳಿಗ್ಗೆ ದೇವಸ್ಥಾನಕ್ಕೆ ಬಂದೆ ಎಂದು ತಿಳಿಸಿದರು.
ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಟೆನ್ನಿಸ್ ಕೃಷ್ಣ ಅವರಿಗೆ ಪ್ರಸಾದ ವಿತರಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಟೆನ್ನಿಸ್ಕೃಷ್ಣ ಅವರಿಗೆ ದೇವಳದ ಗೌರವಾರ್ಥ ಶಲ್ಯ ತೊಡಿಸಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ಸುಭಾಶ್ ರೈ ಬೆಳ್ಳಿಪ್ಪಾಡಿ ಮತ್ತು ಟೆನ್ನಿಸ್ಕೃಷ್ಣ ಅವರ ಜೊತೆ ಬಂದಿದ್ದ ಚಿತ್ರದ ನಿರ್ದೇಶಕರುಗಳು ಉಪಸ್ಥಿತರಿದ್ದರು.