





ಪುತ್ತೂರು: ರೈಲು ನಿಲ್ದಾಣದ ಬಳಿಯಿರುವ ಪುರಾತನ ಕಾರಣಿಕ ಕ್ಷೇತ್ರ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಕನ್ನಡದ ಹಿರಿಯ ಹಾಸ್ಯ ಚಲನ ಚಿತ್ರ ನಟ ಟೆನ್ನೀಸ್ ಕೃಷ್ಣ ಮೇ.5ರಂದು ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಕ್ಷೇತ್ರದ ಜೀರ್ಣೋದ್ಧಾರ ಹಾಗೂ ಕೃಷ್ಣಶಿಲೆಯ ಕಲ್ಲಿನ ಕೆತ್ತನೆಗಳನ್ನು ವೀಕ್ಷಣೆ ಮಾಡಿದ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಧರ್ಮದರ್ಶಿ ಐತ್ತಪ್ಪ ಸಪಲ್ಯಯವರು ಶಾಲು ಹೊದಿಸಿ, ದೇವಿಯ ಪ್ರಸಾದ ನೀಡಿ ಗೌರವಿಸಿದರು. ಕ್ಷೇತ್ರದ ಕೃಷ್ಣಪ್ರಸಾದ್ ಬೆಟ್ಟ ಹಾಗೂ ಲಕ್ಷ್ಮೀಪ್ರಸಾದ್ ಬೆಟ್ಟ ಉಪಸ್ಥಿತರಿದ್ದರು.









