ನೆಲ್ಯಾಡಿ ಸಂತ ಅಲ್ಫೋನ್ಸ ಕ್ಷೇತ್ರದಲ್ಲಿ ಚಿಣ್ಣರಿಂದ ಪವಿತ್ರ ಪರಮ ಪ್ರಸಾದ ಸ್ವೀಕರಣಾ ಕಾರ್ಯಕ್ರಮ

0

ನೆಲ್ಯಾಡಿ :ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ದಿವ್ಯ ಬಾಲರ ಪವಿತ್ರ ಪರಮ ಪ್ರಸಾದ ಸ್ವೀಕರಣಾ ಕಾರ್ಯಕ್ರಮ ಭಕ್ತಿ ಪೂರ್ವಕವಾಗಿ ಜರುಗಿತು.

ಹತ್ತು ಮಕ್ಕಳು ಹತ್ತು ದಿನಗಳಿಂದ ಪ್ರಾರ್ಥನೆ ಮತ್ತು ತರಬೇತಿಯ ಮುಖಾಂತರ ಈ ಧಾರ್ಮಿಕ ವಿಧಿಗೆ ಸಿದ್ಧತೆ ಮಾಡಿಕೊಂಡಿದ್ದರು.

ಈ ಸಂದರ್ಭದಲ್ಲಿ ಪುಣ್ಯ ಕ್ಷೇತ್ರದ ವಂದನಿಯ ಫಾ. ಶಾಜಿ ಮಾತ್ಯು,ವಂದನಿಯ ಫಾ.ಆಗಸ್ಟಿನ್ ಪೊಟ್ಟಮ್ ಕುಳಂಗರ,ಕಂಕನಾಡಿ ವಂದನಿಯ ಫಾ.ಕುರಿಯಾಸ್, ಜಗದಲ್ಪುರ್,ವಂದನಿಯ ಫಾ.ಶಾಜನ್ ಎಂಬ್ರಾಂಡಿ ವಯಲಿಲ್ ಮೈಸೂರ್, ವಂದನಿಯ ಫಾ.ಸೇಬಾಷ್ಟಿಯನ್ ಪುನ್ನತಾನಮ್ ಬೋಲ್ಮಿ ನಾರ್,ಕೊಕ್ಕಡದ ವಂದನಿಯ ಫಾ.ಜಿಬಿನ್ ವಂದನಿಯ ಫಾ ಅಲೆಕ್ಸ್ ಉಪಸ್ಥಿತರಿದ್ದರು. ವಂದನಿಯ ಸಿಸ್ಟರ್ ಎಲ್ ಸ್ಲಿಟ್,ವಂದನಿಯ ಸಿಸ್ಟರ್ ಆಲ್ಫಿ, ಪ್ರಸ್ಟಿನ ರೊಯ್, ರೊಯ್ ಕೊಳಂಗರಾತ್ತ್ ತರಬೇತಿ ನೀಡಿದರು.

LEAVE A REPLY

Please enter your comment!
Please enter your name here