ಪುತ್ತೂರು:ಬೊಳುವಾರಿನಲ್ಲಿ ಸ್ಕೂಟರ್ ಡಿಕ್ಕಿಯಾಗಿ ಪಾದಚಾರಿ ಮತ್ತು ಸವಾರ ಗಾಯಗೊಂಡಿರುವ ಘಟನೆ ನಡೆದಿದೆ.
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಜತೆ ಕಾರ್ಯದರ್ಶಿಯಾಗಿರುವ ನೌಶದ್ ಮತ್ತು ಸ್ಕೂಟರ್ ಸವಾರ ತಾರಿಗುಡ್ಡೆ ನಿವಾಸಿ ಬಾವು ಯಾನೆ ಬಾವುಂಞಿ ಅವರು ಗಾಯಗೊಂಡಿದ್ದಾರೆ.
ನೌಶದ್ ಅವರು ತಮ್ಮ ಅಂಗಡಿಯನ್ನು ಬಂದ್ ಮಾಡಿ ರಸ್ತೆ ದಾಟುತ್ತಿದ್ದ ವೇಳೆ ಸ್ಕೂಟರ್ ಅವರಿಗೆ ಡಿಕ್ಕಿಯಾಗಿದೆ.ಇಬ್ಬರಿಗೂ ತೀವ್ರ ಗಾಯವಾದ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.