ಪುತ್ತೂರು:ಬೊಳುವಾರಿನಲ್ಲಿ ಮೇ 7ರಂದು ರಾತ್ರಿ ಪಾದಚಾರಿಗೆ ಸ್ಕೂಟರ್ ಅಪಘಾತಗೊಂಡ ಘಟನೆಗೆ ಸಂಬಂಧಿಸಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೊಳುವಾರಿನಲ್ಲಿ ಮಹಮ್ಮದ್ ಝಿಯಾದ್ ಎಂಬವರು ಚಲಾಯಿಸುತ್ತಿದ್ದ ಸ್ಕೂಟರ್, ರಸ್ತೆ ದಾಟುತ್ತಿದ್ದ ಬೊಳುವಾರು ನಿವಾಸಿ ನೌಶದ್ ಅವರಿಗೆ ಡಿಕ್ಕಿಯಾಗಿದೆ.ಡಿಕ್ಕಿಯ ರಭಸಕ್ಕೆ ಸ್ಕೂಟರ್ ಮುಂದಕ್ಕೆ ಚಲಿಸಿ ವಿರುದ್ಧ ದಿಕ್ಕಿನಿಂದ ರವಿ ಕುಮಾರ್ ಎಂಬವರು ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಡಿಕ್ಕಿಯಾಗಿದೆ.ಪರಿಣಾಮ ಅಪಘಾತಕ್ಕೆ ಕಾರಣವಾದ ಸ್ಕೂಟರ್ ಸವಾರ ಮಹಮ್ಮದ್ ಝಿಯಾದ್, ಸಹಸವಾರ ಅಬ್ದುಲ್ ಖಾದರ್ ಯಾನೆ ಬಾವೂಚ್, ಪಾದಚಾರಿ ನೌಶದ್ ಮತ್ತು ಇನ್ನೊಂದು ಸ್ಕೂಟರ್ ಸವಾರ ರವಿ ಕುಮಾರ್ ಎಂಬವರು ಗಾಯಗೊಂಡಿದ್ದರು.ತೀವ್ರ ಗಾಯಗೊಂಡ ನೌಶದ್ ಮತ್ತು ಬಾವೂಚ್ ಅವರನ್ನು ಮಂಗಳೂರು ಅಸ್ಪತ್ರೆಗೆ ದಾಖಲಿಸಲಾಗಿತ್ತು.ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.