ಪುಣಚ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಉಗ್ರ ತಾಣಗಳ ವಿರುದ್ಧ ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಸೇನಾ ಕಾರ್ಯಚರಣೆಯನ್ನು ಯಶಸ್ವಿಯಾಗಿ ನಡೆಸಿರುವ ಭಾರತೀಯ ಸೇನಾ ಯೋಧರಿಗೆ ಒಳಿತಾಗಲಿ, ಸೇನೆಗೆ ಇನ್ನಷ್ಟು ಶಕ್ತಿಯನ್ನು ಭಗವಂತನು ಅನುಗ್ರಹಿಸಲಿ ಎಂದು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಆಡಳಿತ ಸಮಿತಿ ಹಾಗೂ ಭಕ್ತಾದಿಗಳಿಂದ ಮೇ.9ರಂದು ಬೆಳಿಗ್ಗೆ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಲಾಯಿತು.
ಬೆಳಿಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯ ಪ್ರಾರ್ಥನೆ ನೆರವೇರಿಸಿ, ವಿಶೇಷ ಪೂಜೆ ನೆರವೇರಿಸಿದರು.

ಆಡಳಿತ ಸಮಿತಿಯ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಗೌರವಾಧ್ಯಕ್ಷ ಎಸ್.ಆರ್.ರಂಗಮೂರ್ತಿ, ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ದಂಬೆ, ಸಂಚಾಲಕ ಶ್ರೀಧರ ಶೆಟ್ಟಿ ದೇವರಗುಂಡಿ, ಜೊತೆ ಕಾರ್ಯದರ್ಶಿ ರಾಮಕೃಷ್ಣ ಮೂಡಂಬೈಲು, ಕೋಶಾಧಿಕಾರಿ ಹರ್ಷ ಶಿಬರೂರಾಯ ಏರಣಿಕಟ್ಟೆ, ಸಮಿತಿ ಸದಸ್ಯರುಗಳಾದ ಪ್ರೀತಮ್ ಪೂಂಜ ಅಗ್ರಾಳ, ವಿಶ್ವನಾಥ ರೈ ಪರಿಯಾಲು, ಜಗದೀಶ ಮಾರಮಜಲು, ಶೀಕೃಷ್ಣ ಭಟ್ ಬರೆಂಗಾಯಿ, ಈಶ್ವರ ನಾಯ್ಕ ಬೇರಿಕೆ, ಗ್ರಾ.ಪಂ.ಅಧ್ಯಕ್ಷೆ ಬೇಬಿ ಪಟಿಕಲ್ಲು, ಗುರುವಪ್ಪ ಪೂಜಾರಿ ದಲ್ಕಾಜೆಗುತ್ತು, ಸಂತೋಷ್ ಕುಮಾರ್ ಕಲ್ಲಾಜೆ, ನಳಿನಿ ಚಂದ್ರಶೇಖರ ದಲ್ಕಾಜೆಗುತ್ತು, ರವೀಂದ್ರ ಶೆಟ್ಟಿ ದೇವರಗುಂಡಿ, ರವೀಂದ್ರ ಪೂಜಾರಿ ದಲ್ಕಾಜೆ, ಮುರಳೀಧರ ರೈ ಬೈಲುಗುತ್ತು, ರಾಜೇಶ್ ರೈ ಕೋಡಂದೂರು, ಸಂದೇಶ್ ರೈ ಕೋಡಂದೂರು, ರಾಧಾಕೃಷ್ಣ ರೈ ಕೋಡಂದೂರು, ರಾಜೇಂದ್ರ ರೈ ಬೈಲುಗುತ್ತು, ಬಾಲಕೃಷ್ಣ ಪೂಜಾರಿ ಹಿತ್ತಿಲ ಸಹಿತ ಹಲವಾರು ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.
