ಕೊಕ್ಕಡ: ಬೈಕ್, ಜೀಪು ಡಿಕ್ಕಿ- ತಂದೆ, ಮಗಳಿಗೆ ಗಾಯ

0

ನೆಲ್ಯಾಡಿ: ಬೈಕ್ ಹಾಗೂ ಜೀಪು ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಾದ ತಂದೆ, ಮಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೇ.8ರಂದು ಬೆಳಿಗ್ಗೆ ಕೊಕ್ಕಡ ಜೋಡುಮಾರ್ಗದಲ್ಲಿ ನಡೆದಿದೆ.


ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಸೌತಡ್ಕ ಕ್ರಾಸ್ ನಿವಾಸಿ ಇ.ಪಿ.ಚಾಕೋ(57ವ.)ಹಾಗೂ ಅವರ ಪುತ್ರಿ ಸ್ನೇಹ ಚಾಕೋ ಗಾಯಗೊಂಡವರಾಗಿದ್ದಾರೆ.

ಚಾಕೋ ಅವರು ತನ್ನ ಬೈಕ್ ನಲ್ಲಿ ಸಹಸವಾರೆಯಾಗಿ ಮಗಳು ಸ್ನೇಹ ಚಾಕೋ ಅವರನ್ನು ಕುಳ್ಳಿರಿಸಿಕೊಂಡು ಕೊಕ್ಕಡ ಕಡೆಯಿಂದ ಪಟ್ರಮೆ ಕಡೆಗೆ ಹೋಗುತ್ತಿರುವ ವೇಳೆ ಕೊಕ್ಕಡ ಜೋಡುಮಾರ್ಗದ ಬಳಿ ತಲುಪುತ್ತಿದ್ದಂತೆ ಕಚ್ಚಾ ಮಣ್ಣುರಸ್ತೆಯಲ್ಲಿ ನಿಲ್ಲಿಸಿದ್ದ ಜೀಪನ್ನು ಅದರ ಚಾಲಕ ಕುಶಾಲಪ್ಪ ಗೌಡರವರು ಒಮ್ಮೆಲೇ ರಸ್ತೆಗೆ ಚಲಾಯಿಸಿದ ಪರಿಣಾಮ ಬೈಕ್‌ನ ಬಲಬದಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಇ.ಪಿ.ಚಾಕೋ ಹಾಗೂ ಸಹಸವಾರೆ ಸ್ನೇಹ ಚಾಕೋ ರವರು ಗಾಯಗೊಂಡಿದ್ದಾರೆ.

ಗಾಯಾಳುಗಳು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಉಜಿರೆಯ ಎಸ್‌ಡಿಎಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇ.ಪಿ.ಚಾಕೋ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here