ಉಪ್ಪಿನಂಗಡಿ: ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನದೊಂದಿಗೆ ಪ್ರತೀಕಾರಕ್ಕೆ ಮುಂದಾಗಿರುವ ಭಾರತೀಯ ಯೋಧರಿಗೆ ಒಳಿತಾಗಲಿ, ಯದ್ಧದಲ್ಲಿ ಜಯ ಪ್ರಾಪ್ತವಾಗಲಿ ಹಾಗೂ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ಭಗವಂತನು ಅನುಗ್ರಹಿಸಲಿ ಎಂಬ ಸಂಕಲ್ಪದೊಂದಿಗೆ ಭಾರತೀಯ ಸೇನೆಯ ಹೆಸರಿನಲ್ಲಿ ಪಕ್ಷ ಬೇಧ ಮರೆತು ಶ್ರೀ ಸಹಸ್ರಲಿಂಗೇಶ್ವರ ಹಾಗೂ ಶ್ರೀ ಮಹಾಕಾಳಿ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ದೇವಾಲಯದ ಅರ್ಚಕ ಮಧುಸೂಧನ್ ಭಟ್ ಪೂಜಾ ವಿಧಿ-ವಿಧಾನವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ಡಾ. ರಾಜಾರಾಮ್ ಕೆ.ಬಿ., ಜಯಂತ ಪೊರೋಳಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಮಹೇಶ ಬಜತ್ತೂರು ಹಾಗೂ ಪ್ರಮುಖರಾದ ವಿದ್ಯಾಲಕ್ಷ್ಮೀ ಪ್ರಭು, ರಾಮಚಂದ್ರ ಮಣಿಯಾಣಿ, ಸುರೇಶ್ ಅತ್ರೆಮಜಲು, ವಿದ್ಯಾಧರ ಜೈನ್, ಕೈಲಾರು ರಾಜಗೋಪಾಲ ಭಟ್, ತಿಮ್ಮಪ್ಪ ಗೌಡ, ಉಷಾ ನಾಯ್ಕ, ಸುದರ್ಶನ್, ನಿತಿನ್, ರವಿ ಇಳಂತಿಲ, ಪ್ರಸಾದ್ ಭಂಡಾರಿ, ಉದಯ ಅತ್ರೆಮಜಲು, ಸದಾನಂದ ನೆಕ್ಕಿಲಾಡಿ, ಮುಕುಂದ ಬಜತ್ತೂರು, ರಾಮಣ್ಣ ಗುಂಡೊಲೆ ಮತ್ತಿತರರು ಉಪಸ್ಥಿತರಿದ್ದರು.