ಭಗತ್ಸಿಂಗ್ ಯುವಶಕ್ತಿ ಸಂಘಟನೆಯು ದೇವಾಲಯ ಅಭಿವೃದ್ಧಿಗೂ ಕಾರಣವಾಗಬೇಕು-ಪೇಜಾವರ ಶ್ರೀ
ಪುತ್ತೂರು: ರಾವನನ ದೈತ್ಯ ಸೇನೆಯ ಎದುರು ರಾಮನ ವಾನರ ಸೇನೆ ಜಯಗಳಿಸಿದಂತೆ ಯುವ ಶಕ್ತಿ ಸಂಘಟನೆಯು ಮೂಲಕ ಕಾರ್ಯೋಣ್ಮುಖವಾಗಬೇಕು. ನಾಡಿನ ಯುವ ಶಕ್ತಿ ಪ್ರಯತ್ನ ಶೀಲರಾಗಬೇಕು. ಭಗತ್ಸಿಂಗ್ ಯುವಶಕ್ತಿ ಸಮಾಜದಲ್ಲಿ ಸಂಘಟನೆಯ ಜೊತೆಗೆ ದೇವಾಲಯ ಅಭಿವೃದ್ಧಿಗೂ ಕಾರಣವಾಗಬೇಕು. ದೇವಾಲಯವನ್ನು ಜೀರ್ಣೋದ್ಧಾರ ಮಾಡುವ ಹಿರಿಯರ ಸಂಕಲ್ಪ ಭಗತ್ ಸಿಂಗ್ ಸಂಘಟನೆಯ ಮೂಲಕ ಈಡೇರಲಿ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಹೇಳಿದರು.
ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಇದರ ವತಿಯಿಂದ ಮೇ.10ರಂದು ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದ ಶ್ರೀಶನೈಶ್ಚರ ಕಲ್ಪೋಕ್ತ ಪೂಜೆ ಎಳ್ಳುಗಂಟು ದೀಪಸೇವೆ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ರಾಮ, ರಾವನರಿಬ್ಬರೂ ಆದರ್ಶರು. ಆದರೆ ವ್ಯಕ್ತಿತ್ವ ಭಿನ್ನವಾಗಿದೆ. ಮಕ್ಕಳಲ್ಲಿ ರಾಮನ ಆದರ್ಶವಿರಬೇಕೇ ಹೊರತು ರಾವನನ ಆದರ್ಶವಲ್ಲ. ಹೆತ್ತ ತಾಯಿ ಹಾಗೂ ಇರುವ ತಾಯಿ ನೆಲೆ ಇವೆರಡೂ ಸ್ವರ್ಗಕ್ಕಿಂತ ಮಿಗಿಲು. ಭಗತ್ ಸೇವಾ ಯುವಶಕ್ತಿ ಸಂಘಟನೆ ಮೂಲಕ ಸಮಾಜದ ಮಕ್ಕಳನ್ನು ಒಟ್ಟು ಸೇರಿಸಿ ಮೂರು ಸಾವಿರ ಮನೆ ಸಂಪರ್ಕ ಮಾಡಿದ್ದು ಸಮಾಜದಲ್ಲಿ ಸ್ನೇಹ ಭಾವದಿಂದ ಹೇಗೆ ಬದುಕಬೇಕೆಂಬುದನ್ನು ತೋರಿಸುತ್ತದೆ. ಸಮಾಜದಲ್ಲಿ ಒಗ್ಗಟ್ಟಿನ ಪಾಠ ಸಂಘಟನೆಯವರಲ್ಲಿದ್ದು ರಾಮನ ಆದರ್ಶ ಮಕ್ಕಳಲ್ಲಿದೆ. ಈ ಸಂಘಟನೆಯು ಸಮಾಜದಲ್ಲಿ ಮಾಡುವ ಕಾರ್ಯವು ಅತ್ಯುತ್ತಮವಾಗಿದೆ ಎಂದು ಶ್ಲಾಘಿಸಿದರು.
ಸೇನೆಗೆ ಕ್ಯಾಂಪ್ಕೋದಿಂದ ರೂ.5ಕೋಟಿ ದೇಣಿಗೆ-ಎಸ್.ಆರ್ ಸತೀಶ್ವಂದ್ರ
ಮುಖ್ಯ ಅತಿಥಿಯಾಗಿದ್ದ ಕ್ಯಾಂಪ್ಕೋದ ಮಾಜಿ ಅಧ್ಯಕ್ಷರು, ಮೋತಿಮಾರು ಶ್ರೀದುರ್ಗಾಪರಮೇರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್.ಆರ್ ಸತೀಶ್ಚಂದ್ರ ಮಾತನಾಡಿ, ಭಾರತವು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿರುವ ದೇಶವಾಗಿದೆ. ಪ್ರಜಾಪ್ರಭುತ್ವದಲ್ಲಿ ಜನಸಂಖ್ಯೆಯೇ ಬಹುಮುಖ್ಯ. ಹೀಗಾಗಿ ನಮ್ಮಲ್ಲಿಯೂ ಬದಲಾವಣೆ ಆಗಬೇಕು. ದೇಶ, ಜಗತ್ತು ಉಳಿಸುವ ಹೊಣೆ ನಮ್ಮೆರಲ್ಲ ಮೇಲಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಸಮಸ್ಯೆ ಎದುರಿಸಬೇಕಾಗಬಹುದು. ಯುದ್ದ ಪ್ರಾರಂಭವಾಗಿದ್ದು ಸೇನಾ ವೆಚ್ಚಕ್ಕಾಗಿ ಕ್ಯಾಂಪ್ಕೋದಿಂದ ರೂ.5ಕೋಟಿ ದೇಣಿಗೆ ನೀಡಲಾಗಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದ ಕೊಡುಗೆ ನೀಡಿದ್ದಾರೆ. ಪ್ರಧಾನಿಯವರು ಕೇಳುವ ಮೊದಲು ನಾವು ಕೊಡುಗೆ ನೀಡಬೇಕು. ಭಾರತ ವಿಜಯೀಯಾಗಬೇಕು. ಜಗತ್ತು ಉಳಿಯಬೇಕಾದರೆ ಭಾರತ ಉಳಿಯವೇಕು. ಭಾರತ ಉಳಿದರೆ ಜಗತ್ತು ಉಳಿಯಬಹುದು ಎಂದರು.
ವ್ಯಕ್ತಿಯಲ್ಲಿ ಪರಿವರ್ತನೆಯಾಗುವ ಮುಖಾಂತರ ಸಮಾಜದ ಪರಿವರ್ತನೆ ಅಗಬೇಕು-ಸುಭಾಶ್ಚಂದ್ರ:
ಬೌಧ್ಧಿಕ್ ನೀಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಹ ಕಾರ್ಯವಾಹ ಸುಭಾಶ್ಚಂದ್ರ ಮಾತನಾಡಿ, 1925ರಲ್ಲಿ ಪ್ರಾರಂಭಗೊಂಡ ರಾಷ್ಟ್ರೀಯ ಸ್ಚಯಂಸೇವಕ ಸಂಘವು ಶತಮಾನೋತ್ಸವದ ಸಂಭ್ರಮದಲ್ಲಿದೆ. ಸೇವೆಯ ಜೊತೆಗೆ ಸಮಾಜದಲ್ಲಿ ಸಂಸ್ಕಾರ ನೀಡುತ್ತಿದೆ. ಸಂಘದ 42 ವಿಧದ ಸಂಘಟನೆಗಳ ಮೂಲಕ ದೇಶ ಕಟ್ಟುವ ಕೆಲಸವಾಗುತ್ತಿದೆ. ಸಂಘದ ಕಾರ್ಯವನ್ನು, ಕಾರ್ಯಕರ್ತರನ್ನು ಸಮಾಜ ಒಪ್ಪಿಕೊಂಡಿದೆ. ಯುವ ಶಕ್ತಿಯ ಜೊತೆ ಸೇವೆಯು ಸೇರಿಕೊಂಡಿದೆ. ವ್ಯಕ್ತಿಯಲ್ಲಿ ಪರಿವರ್ತನೆ ಆಗುವ ಮುಖಾಂತರ ಸಮಾಜದ ಪರಿವರ್ತನೆ ಅಗಬೇಕು ಎಂದರು.
ಯುವಶಕ್ತಿಯಯಿಂದ ಸಮಾಜದ ಪರಿವರ್ತನೆ ಮಾಡುವ ಕಾರ್ಯ -ಶಶಿಕುಮಾರ್ ರೈ ಬಾಲ್ಯೊಟ್ಟು:
ಅಧ್ಯಕ್ಷತೆ ವಹಿಸಿದ್ದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಭಗತ್ ಸಿಂಗ್ ಯುವಶಕ್ತಿಯ ಯುವಕ ತಂಡ ಆರು ಗ್ರಾಮಗಳಲ್ಲಿ ಸಂಚರಿಸಿ ಮನೆ ಮನೆ ಸಂಪರ್ಕ ಮಾಡಿದೆ. ವಿದ್ಯಾರ್ಥಿ ದಿಶೆಯಲ್ಲಿ ಸಮಾಜ ಕಟ್ಟುವ, ಸಮಾಜವನ್ನು ಪರಿವರ್ತಣೆ ಮಾಡುವ ಕಾರ್ಯವಾಗುತ್ತಿದೆ. ಸಂಘಟನೆಯ ಸೇವಾ ಕಾರ್ಯಗಳ ಮೂಲಕ ಬದಲಾವಣೆ, ಸಮಾಜದ ಪರಿವರ್ತನೆ ಮಾಡುವ ಕಾರ್ಯ ಯುವಕರಿಂದ ನಡೆಯುತ್ತಿದೆ ಎಂದರು.
ಕಾರ್ಯಾಲಯ ಮತ್ತು ಧ್ವಜಸ್ಥಂಭ ಉದ್ಘಾಟನೆ:
ಭಗತ್ಸಿಂಗ್ ಸೇವಾ ಯುವಶಕ್ತಿಯಿಂದ ಉಪ್ಪಳಿಗೆಯಲ್ಲಿ ನಿರ್ಮಿಸಲಾದ ಕಾರ್ಯಾಲಯವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯವಾಹಕರಾದ ನವೀನ್ ಪ್ರಸಾದ್ ಹಾಗೂ ವಿಭಾಗ ಸಹ ಕಾರ್ಯವಾಹ ಸುಭಾಶ್ಚಂದ್ರ ದೀಪ ಬೆಳಗಿಸಿ ಉದ್ಘಾಟಿಸಿದರು. ಯುವ ಉದ್ಯಮಿ ಸಂತೋಷ್ ಕುಮಾರ್ ರೈ ಕೈಕಾರ ಧ್ವಜಸ್ಥಂಭ ಉದ್ಘಾಟಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು, ಇರ್ದೆ ಶ್ರೀವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬಾಲ್ಯೊಟ್ಟು, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ಪ್ರಕಾಶ್ ರೈ ಬೈಲಾಡಿ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.
ಶನೈಶ್ಚರ ಕಲ್ಪೋಕ್ತ ಪೂಜೆ:
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಅರ್ಚಕ ಅನಂತರಾಮ ಮಡಕುಳ್ಳಾಯ ಮತ್ತು ರಾಧಾಕೃಷ್ಣ ಭಟ್ ಕಕ್ಕೂರು ಇವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀಶನೈಶ್ಚರ ಕಲ್ಪೋಕ್ತ ಪೂಜೆ ಎಳ್ಳುಗಂಟು ದೀಪಸೇವೆ ನಡೆಯಿತು.
ಗೌರವಾರ್ಪಣೆ:
ಭಗತ್ ಸಿಂಗ್ ಸೇವಾ ಯುವ ಶಕ್ತಿಯ ಕಾರ್ಯಗಳಿಗೆ ಮಾರ್ಗದರ್ಶನ ನೀಡುತ್ತಿರುವ ಇರ್ದೆ ಶ್ರೀವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬಾಲ್ಯೊಟ್ಟು, ಕಾರ್ಯಕ್ರಮದಲ್ಲಿ ಸಹಕರಿಸಿದ ಹಿತೈಶ್ ಬೈಲಾಡಿಯವರನ್ನು ಗೌರವಿಸಲಾಯಿತು.

ಭಗತ್ ಸಿಂಗ್ ಯುವಶಕ್ತಿಯ ಸ್ಥಾಪಕಾಧ್ಯಕ್ಷ ಚೇತನ್ ಉಪ್ಪಳಿಗೆ ಸ್ವಾಗತಿಸಿದರು. ಅಧ್ಯಕ್ಷ ಅಕ್ಷಯ್ ಉಪ್ಪಳಿಗೆ ವಂದಿಸಿದರು. ಸದಾಶಿವ ರೈ ಗುಮ್ಮಟೆಗದ್ದೆ ಹಾಗೂ ಶಿಕ್ಷಕಿ ರೇಣುಕಾ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಸಾನಿಕ ಪ್ರಾರ್ಥಿಸಿದರು. ದೇಶದ ಗಡಿಯಲ್ಲಿ ಸೇನಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ ಭಾರತೀಯ ಸೇನಾ ಯೋಧರಿಗೆ ಒಳಿತಾಗಲಿ, ಸೇನೆಗೆ ಇನ್ನಷ್ಟು ಶಕ್ತಿ ನೀಡಲಿ, ಯುದ್ಧದಲ್ಲಿ ಭಾರತವು ವಿಜಯೀಯಾಗಲಿ ಎಂದು ತುಪ್ಪದ ದೀಪ ಉರಿಸಲಾಯಿತು. ಪೆಹಲ್ಗಾಮ್ನಲ್ಲಿ ನಡೆದ ಉಗ್ರರಿಂದ ಹತ್ಯೆಗೊಳಗಾದವರಿಗೆ ಮೌನಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಏಳು ವರ್ಷಗಳ ಹಿಂದೆ, ಕೊರೋನಾ ಸಮಯದಲ್ಕಿ ಸಾಮಾಜಿಕ ಚಿಂತನೆಯೊಂದಿಗೆ ಭಗತ್ಸಿಂಗ್ ಸೇವಾ ಯುವಶಕ್ತಿಯ ಉದಯವಾಗಿದೆ. ನಮ್ಮ ಸಂಘಟನೆಯಲ್ಲಿ ಸಾಮೂಹಿಕ ನಾಯಕತ್ಬವೇ ಪ್ರಾಮುಖ್ಯವಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಿದ್ದಾಂತದಲ್ಲಿ ನಮ್ಮ ಸಂಘಟನೆಯು ಕಾರ್ಯನಿರ್ವಹಿಸುತ್ತಿದೆ. ಯುವ ಶಕ್ತಿಯಿಂದ ಪ್ರಾರಂಭಗೊಂಡಿರುವ ಸಂಘಟನೆಯ ಮುಖಾಂತರ ರಾಷ್ಟ್ರೀಯ ಹಬ್ಬಗಳ ಆಚರಣೆ ಮಾಡಲಾಗುತ್ತಿದೆ. ನೂರಾರು ಮನೆಗಳಲ್ಲಿ ದೇಶಭಕ್ತಿ ಸಂದೇಶ ಸಾರಲಾಗಿದೆ. 27 ಸದಸ್ಯರನ್ನು ಹೊಂದಿರುವ ನಮ್ಮ ಸಂಘಟನೆಯು 6 ಗ್ರಾಮಗಳ ಸುಮಾರು ಮೂರುವರೆ ಸಾವಿರ ಮನೆಗಳನ್ನು ಸಂಪರ್ಕಿಸಿ, ಆಮಂತ್ರಣ ನೀಡಲಾಗಿದೆ. ಮಾಡಲಾಗಿದೆ.