ಪುತ್ತೂರು: ಅಪರೇಷನ್ ಸಿಂಧೂರ್ನ ಯಶಸ್ವಿಯ ಹಿನ್ನೆಲೆಯಲ್ಲಿ ನಮ್ಮ ದೇಶದ ಸುಭಿಕ್ಷೆ, ಸೈನಿಕರ ಶ್ರೇಯೋಭಿವೃದ್ಧಿ ಹಾಗೂ ಪ್ರಧಾನಿ ಮೋದಿಜಿಗೆ ಇನ್ನಷ್ಟು ಶಕ್ತಿ, ಮನೋಬಲ ನೀಡುವಂತೆ ಗ್ರಾಮಾಂತರ ಮಹಿಳಾ ಮೋರ್ಚಾದಿಂದ ಮೇ.13 ರಂದು ನರಿಮೊಗರು ಶ್ರೀ ಮೃತ್ಯುಂಜೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಮಹಾಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮಾಂತರ ಮಹಿಳಾ ಮೋರ್ಛಾ ಅಧ್ಯಕ್ಷೆ ಯಶೋದಾ ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
