ನಿಟ್ಟೆ ಯುನಿವರ್ಸಿಟಿ “ಮೀಟ್ ಆ್ಯಂಡ್ ಗ್ರೀಟ್” ಕಾರ್ಯಕ್ರಮ

0

ಪುತ್ತೂರು: ನಿಟ್ಟೆ ವಿಶ್ವವಿದ್ಯಾಲಯದ “ಮೀಟ್ ಆ್ಯಂಡ್ ಗ್ರೀಟ್” ಕಾರ್ಯಕ್ರಮ ಪುತ್ತೂರಿನ ತೆಂಕಿಲದ ಒಕ್ಕಲಿಗರ ಸಮುದಾಯ ಭವನದಲ್ಲಿ ಮೇ.10 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ವಿವಿಯ ವಿವಿಧ ಕೋರ್ಸ್‌ಗಳ ಬಗ್ಗೆ ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮವನ್ನು ಸಹಾಯಕ ನಿರ್ದೇಶಕ ( ಔಟ್ ರೀಚ್) ವಿವೇಕ್ ಭಂಡಾರಿ ಪ್ರಾರಂಭಿಸಿದರು. ಫಾರ್ಮಸಿ ಕಾಲೇಜಿನ ನಿರ್ದೇಶಕ ಡಾ.ಸಿ.ಎಸ್. ಶಾಸ್ತ್ರಿ ಅವರು ಫಾರ್ಮಸಿ ಕ್ಷೇತ್ರದ ಭವಿಷ್ಯ ಹಾಗೂ ಅವಕಾಶಗಳ ಬಗ್ಗೆ ವಿವರಿಸಿದರು.ವೈದ್ಯಕೀಯ, ಅಲೈಡ್ ಹೆಲ್ತ್ ಸೈನ್ಸ್, ಎಂಜಿನಿಯರಿಂಗ್, ಮಾಧ್ಯಮ, ನರ್ಸಿಂಗ್ ಹಾಗೂ ಹಾಸ್ಪಿಟಾಲಿಟಿ ವಿಭಾಗಗಳ ಬಗ್ಗೆ ನಿಟ್ಟೆ ತಂಡದ ಸದಸ್ಯರು ಸ್ಪಷ್ಟನೆ ನೀಡಿದರು. ಕಾರ್ಯಕ್ರಮದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಸಹಾಯಕ ನಿರ್ದೇಶಕಿ ರಚನಾ ಉಪಸ್ಥಿತರಿದ್ದರು.


ಉಜಿರೆ, ಧರ್ಮಸ್ಥಳ, ಸುಬ್ರಮಣ್ಯ, ಮೂಡಬಿದಿರೆ, ಬಂಟ್ವಾಳ ಸೇರಿದಂತೆ ಪುತ್ತೂರು ಸುತ್ತಲಿನ ಹಲವು ಪ್ರದೇಶಗಳಿಂದ ಪಾಲಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೊದಲ ಬಾರಿಗೆ ನಡೆಸಿದ ಈ ರೀತಿಯ ಕಾರ್ಯಕ್ರಮ ಪುತ್ತೂರಿನ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ನೇರ ಸಂವಾದಕ್ಕೆ ದಾರಿ ತೆರೆದು, ಜನರ ಮೆಚ್ಚುಗೆ ಗಳಿಸಿತು.

LEAVE A REPLY

Please enter your comment!
Please enter your name here