ಪುತ್ತೂರು: ಡಾ. ಸೌರಭಾ ಜಯರಾಮ ಅವರು ರಾಜೀವ್ ಗಾಂಧಿ ಯೂನಿವರ್ಸಿಟಿಯ ಆಶ್ರಯದಲ್ಲಿ ನಡೆದ ಆಯುರ್ವೇದ ಎಂ.ಡಿ.ಯ ಅಂತಿಮ ಪರೀಕ್ಷೆಯಲ್ಲಿ 640 ಅಂಕ ಪಡೆದು ಕ್ರಿಯಾಶರೀರ ವಿಭಾಗದಲ್ಲಿ 2ನೇ ರ್ಯಾಂಕ್ ಪಡೆದಿದ್ದಾರೆ.
ಕೊಪ್ಪಳದಲ್ಲಿರುವ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮೆಡಿಕಲ್ ಕಾಲೇಜ್ ನಲ್ಲಿ ಎಂ.ಡಿ ವ್ಯಾಸಂಗ ಮಾಡಿರುವ ಸೌರಭ ಪ್ರಸ್ತುತ ಬೆಳಗಾವಿ ಬೈಲಹೊಂಗಲದ ಎಸ್.ಜಿ.ವಿ. ಆಯುರ್ವೇದ ಮೆಡಿಕಲ್ ಕಾಲೇಜ್ ನಲ್ಲಿ ವೈದ್ಯಕೀಯ ವಿಭಾಗದ ಕ್ರಿಯಾ ಶರೀರ ವಿಷಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯ ಶಾಂತಾ ಸಭಾ ಭವನದ ಮಾಲಿಕರಾದ ಶಾಂತಾ ಕುಂಟಿನಿ ಹಾಗೂ ಪಾಕ ತಜ್ಞ ರವಿ ಕುಂಟಿನಿ ಅವರ ಪುತ್ರಿಯಾದ ಇವರು ಮಂಗಳೂರು ಕೆನರಾ ಪ್ರೌಢ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಜಯರಾಮ ಉಳುವಾನ ಅವರ ಪತ್ನಿ.