ದೊಡ್ಡಡ್ಕ: ಊರವರ ಮುತುವರ್ಜಿಯಿಂದ ನವೀಕರಣಗೊಂಡ ನೇಲ್ಯಡ್ಕ ಅಂಗನವಾಡಿ ಕೇಂದ್ರದ ಪ್ರವೇಶೋತ್ಸವ

0

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಡ್ಡಡ್ಕದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ನೇಲ್ಯಡ್ಕ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಊರವರೇ ಮುತುವರ್ಜಿ ವಹಿಸಿ, ದಾನಿಗಳ ನೆರವು, ಸ್ಥಳೀಯರ ಸಹಕಾರದಿಂದ ವ್ಯವಸ್ಥಿತವಾಗಿ ದುರಸ್ಥಿ ಹಾಗೂ ನವೀಕರಣಗೊಂಡ ಕಟ್ಟಡದ ಉದ್ಘಾಟನೆ ಹಾಗೂ ಮಕ್ಕಳ ಪ್ರವೇಶೋತ್ಸವು ಮೇ.15ರಂದು ನೆರವೇರಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ ಮಾತನಾಡಿ, ನೇಲ್ಯಡ್ಕದಲ್ಲಿ ಹೊಸ ಅಂಗನವಾಡಿ ಕಟ್ಟಡ ನಿರ್ಮಾಣವಾಗಬೇಕು ಎಂಬ ಕನಸಿತ್ತು. ಜಾಗದ ಕೊರತೆಯಿಂದ ಅದು ನನಸಾಗಿಲ್ಲ. ಅದರೂ ಹಳೇಯ ಕಟ್ಟಡವನ್ನು ವ್ಯವಸ್ಥಿತವಾಗಿ ಸುಬ್ರಹ್ಮಣ್ಯ ಬಲ್ಯಾಯ ಮುತುವರ್ಜಿ ಹಾಗೂ ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ ಎಂದರು.
ಅಂಗನವಾಡಿ ಮೇಲ್ವಿಚಾರಕಿ ನಾಗರತ್ನ ಮಾತನಾಡಿ, ನವೀಕೃತಗೊಂಡಿರುವ ಕಟ್ಟಡವು ಸುಂದರ ಹಾಗೂ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಇಲ್ಲಿ ಮಕ್ಕಳ ದಾಖಲಾತಿ ಏರಿಕೆಯಾಗಬೇಕು. ಮಕ್ಕಳ ಸುರಕ್ಷತೆಯ ಜೊತೆಗೆ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣಗೊಂಡಿದ್ದು ಇಲಾಖೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.
ನಿವೃತ್ತ ಎ.ಎಸ್.ಐ ರಾಮ ನಾಯ್ಕ ಗೆಣಸಿನಕುಮೇರು ಮಾತನಾಡಿ, ನಮ್ಮ ಊರಿನ ಅಂಗನವಾಡಿ ಸುಸ್ಥಿತಿಯಲ್ಲಿರಬೇಕು ಎಂಬ ಕಾಳಜಿಯಿಂದ ಊರವರು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಿರುವುದನ್ನು ಶ್ಲಾಘಿಸಿದರು.
ಬಾಲವಿಕಾಸ ಸಮಿತಿ ಅಧ್ಯಕ್ಷ ವಸಂತಿ ಅಧ್ಯಕ್ಷತೆ ವಹಿಸಿದ್ದರು. ಆರ್ಯಾಪು ಗ್ರಾ.ಪಂ ಸದಸ್ಯ ಶ್ರೀನಿವಾಸ ರೈ, ಆಶಾ ಕಾರ್ಯಕರ್ತೆ ಶಾಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ
ಅಂಗನವಾಡಿ ಕಟ್ಟಡ ದುರಸ್ಥಿ ಹಾಗೂ ನವೀಕರಣದಲ್ಲಿ ಪ್ರಮುಖವಾಗಿ ಸಹಕರಿಸಿದ ನಾರಾಯಣ ಬಲ್ಯಾಯ, ಮನಮೋಹನ ಪಂಡಿತ್, ಸುಬ್ರಹ್ಮಣ್ಯ ಬಲ್ಯಾಯ, ನೇಲ್ಯಡ್ಕ ಅಂಗನವಾಡಿಯಿಂದ ವರ್ಗಾವಣೆಗೊಂಡಿರುವ ಕಾರ್ಯಕರ್ತೆಯರಾದ ಶಾಂತಿ, ಜಾನಕಿ, ಪ್ರಭಾರ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸಿದ್ದ ಕುಸುಮ ಹಾಗೂ ಅಶ್ವಿನಿಯವರನ್ನು ಸನ್ಮಾನಿಸಲಾಯಿತು. ಧನಸಹಾಯ ನೀಡಿದ ಪೃಥ್ವಿರಾಜ್, ಸತೀಶ್ ಕುಲಾಲ್ ಅಟ್ಲಾರ್, ರಾಜೇಶ್ ನಾೖಕ್‌, ಸೇಸಪ್ಪ ನಾಯ್ಕ ದೊಡ್ಡಡ್ಕ, ಜಯರಾಮ ಟೈಲರ್ ದೊಡ್ಡಡ್ಕ, ಪ್ರಸಾದ್ ಬಲ್ಯಾಯ, ಆಶಾ ಶಾಂತಿಯವರನ್ನು ಗೌರವಿಸಲಾಯಿತು.
ಜಯಶ್ರೀ ಪ್ರಾರ್ಥಿಸಿದರು. ವಾಣಿಶ್ರೀ ಸ್ವಾಗತಿಸಿದರು. ಪುಷ್ಪಾ ಕಾರ್ಯಕ್ರಮ ನಿರೂಪಿಸಿ, ಅಂಗನವಾಡಿ ಕಾರ್ಯಕರ್ತೆ ಆಶಾ ವಂದಿಸಿದರು.

ಸಹಾಯಕಿ ದೀಪಾ, ಪವಿತ್ರ, ಭಾರತಿ, ಯೋಗೀಶ್ ಬಲ್ಯಾಯ, ಮೋಹಿನಿ, ಪೂವಪ್ಪ ನಾಯ್ಕ, ಚಂದ್ರಶೇಖರ, ಸೌಮ್ಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ದೊಡ್ಡಡ್ಕ ಗೆಳೆಯರ ಬಳಗದವರು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನೆರವೇರಿತು. ಅಂಗನವಾಡಿ ಪುಟಾಣಿ, ಪೋಷಕರು, ಬಾಲವಿಕಾಸ ಸಮಿತಿ ಸದಸ್ಯರು, ಸ್ತ್ರೀಶಕ್ತಿ ಸಂಘದ ಸದಸ್ಯರು ಹಾಗೂ ನೂರಾರು ಮಂದಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಸುಬ್ರಹ್ಮಣ್ಯ ಬಲ್ಯಾಯ ಮಾತನಾಡಿ, ಹಳೇ ಕಟ್ಟಡವು ಶಿಥಿಲಗೊಂಡಿರುವುದಲ್ಲದೆ ರಸ್ತೆಯ ಅಂಚಿನಲ್ಲೇ ಹಳೇ ಕಟ್ಟಡವರಿವುದರಿಂದ ಮಕ್ಕಳ ಸುರಕ್ಷತೆಗಾಗಿ ಹೊಸ ಕಟ್ಟಡ ನಿರ್ಮಿಸುವ ನಮ್ಮೆಲ್ಲರ ಕನಸಾಗಿತ್ತು. ಹೊಸ ಕಟ್ಟಡ ನಿರ್ಮಿಸಲು ನಿವೇಶನಕ್ಕಾಗಿ ಇಲಾಖೆ ಮನವಿ ಸಲ್ಲಿಸಿರುವುದಲ್ಲದೇ ತಾಲೂಕು ಕಚೇರಿಯಲ್ಲಿ ಸಂಜೆ ತನಕ ಕಾದು ಕುಲಿತರೂ ಸ್ಪಂದನೆ ದೊರೆಯದೇ ಇದ್ದಾಗ ಹಳೇ ಕಟ್ಟಡ ದುರಸ್ಥಿ ಹಾಗೂ ನವೀಕರಣಗೊಳಿಸಲಾಗಿದೆ. ಕಟ್ಟಡದ ಛಾವಣಿ, ಟೈಲ್ಸ್, ಕಾಂಪೌಂಡ್, ಇಂಟರ್‌ಲಾಕ್ ಇನ್ನಿತರ ಕೊಡುಗೆಗಳನ್ನು ದಾನಿಗಳು ನೀಡಿದ್ದು ಸುಂದರ ಕಟ್ಟಡ ನಿರ್ಮಾಣಗೊಂಡಿದೆ. ದೊಡ್ಡಡ್ಕ ಗೆಳೆಯರ ಬಳಗ ಹಾಗೂ ಊರವರು ಅಭಿವೃದ್ಧಿ ಕೆಲಸಗಳಲ್ಲಿ ಸಹಕರಿಸಿದ್ದಾರೆ.

LEAVE A REPLY

Please enter your comment!
Please enter your name here