ಸತ್ಯಾತ್ಮ ಕುಂಟಿನಿಗೆ ಮಿಮಿಕ್ರಿಯಲ್ಲಿ ಬಹುಮಾನ

0

ಬೆಳ್ತಂಗಡಿ: ಮಂಗಳೂರು ಎಸ್‌ಡಿಎಂ ಲಾ ಕಾಲೇಜು ವಿದ್ಯಾರ್ಥಿ ಸತ್ಯಾತ್ಮ ಭಟ್ ಕುಂಟಿನಿ ಅವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಧೀನದಲ್ಲಿ ನಡೆದ ಅಂತರ ವಲಯ ಯುವಜನೋತ್ಸವ 2025ರ ಮಿಮಿಕ್ರಿ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ್ದಾರೆ.

ಸತ್ಯಾತ್ಮ ಭಟ್ ಅವರು ಮೊದಲು ವಲಯ ಮಟ್ಟದ ಮಿಮಿಕ್ರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸುತ್ತಿಗೆ ಆಯ್ಕೆಯಾಗಿದ್ದರು. ಹುಬ್ಬಳ್ಳಿಯಲ್ಲಿ ನಡೆದ ಅಂತರ ವಲಯ ಯುವಜನೋತ್ಸವದಲ್ಲಿ ಸತ್ಯಾತ್ಮ ಕುಂಟಿನಿ ಅವರು ದ್ವಿತೀಯ ಸ್ಥಾನ ಗಳಿಸಿದರು. ಜೊತೆಗೆ ಅವರು ವಿಧ್ಯಾಭ್ಯಾಸ ಮಾಡುತ್ತಿರುವ ಎಸ್‌ಡಿಎಂ ಲಾ ಕಾಲೇಜಿನಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದರು‌. ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಎಸ್. ಬಸವರಾಜು ಮತ್ತು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಧಾರವಾಡದ ಬಾಲಭವನ ಅಕಾಡೆಮಿಯ ಅಧ್ಯಕ್ಷ ಸಂಗಮೇಶ್ ಎ. ಬುಳಕೇಶ್ವರ ಮತ್ತಿತರರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸತ್ಯಾತ್ಮ ಅವರು ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯ ಶಾಂತ ಸಭಾಭವನದ ಮಾಲಕರಾದ ಶಾಂತಾ ಕುಂಟಿನಿ ಹಾಗೂ ಪಾಕ ತಜ್ಞ ರವಿ ಕುಂಟಿನಿ ಅವರ ಪುತ್ರ.

LEAVE A REPLY

Please enter your comment!
Please enter your name here