ಕೌಡಿಚ್ಚಾರ್:ಮಾಡನ್ನೂರ್ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಕಾರ್ಯಾಚರಿಸುತ್ತಿರುವ ಮಾಡನ್ನೂರ್ ರೇಂಜ್‌ಗೋಳಪೆಟ್ಟ ನೂರುಲ್ ಇಸ್ಲಾಂ ಸೆಕೆಂಡರಿ ಕೇಂದ್ರ ಮದ್ರಸ ಮಾಡನ್ನೂರ್ ಎಸ್‌ಕೆಎಸ್‌ಬಿವಿ ವತಿಯಿಂದ ಮಾದಕ ವ್ಯಸನದ ವಿರುದ್ಧ ಗ್ರ್ಯಾಂಡ್ ಅಸೆಂಬ್ಲಿ ಹಾಗೂ ಬೃಹತ್ ಅಭಿಯಾನ ನಡೆಯಿತು.
ಮಾಡನ್ನೂರ್ ಖತೀಬ್ ಉಸ್ತಾದ್ ಎಸ್.ಬಿ.ಮುಹಮ್ಮದ್ ದಾರಿಮಿ ದುಆ ನೆರವೇರಿಸಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ,”ವರ್ತಮಾನ ಕಾಲದಲ್ಲಿ ಮಾದಕ ವಸ್ತುಗಳ ಬಳಕೆ ವಿವಿಧ ರೀತಿಯಲ್ಲಿ ಇದೆ.ಸಣ್ಣ ಮಕ್ಕಳಿಗೆ ಚಾಕೊಲೇಟ್ ರೂಪದಲ್ಲಿ ಕೂಡ ಮಾದಕ ವಸ್ತುಗಳನ್ನು ನೀಡಿ ದಾರಿ ತಪ್ಪಿಸಲಾಗುತ್ತಿದೆ.ವಿದ್ಯಾರ್ಥಿಗಳು, ಯುವಕರು ಇದರ ಬಲಿ ಪಶುಗಳಾಗಿದ್ದು ಸಮಾಜ ದ್ರೋಹಿಗಳು ಲಕ್ಷಾಂತರ ಹಣಗಳಿಸುವ ದುರುದ್ದೇಶದಿಂದ ಮಾದಕ ವಸ್ತುಗಳನ್ನು ಮಾರಾಟ ಮಾಡುವುದರೊಂದಿಗೆ ಮಕ್ಕಳು ಮತ್ತು ವಿದ್ಯಾರ್ಥಿ ಯುವ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.ಆದ್ದರಿಂದ ನಮಗೆ ಪರಿಚಯ ಇಲ್ಲದ ಯಾವುದೇ ವಸ್ತುಗಳನ್ನು ಖರೀದಿಸುವಾಗ ಜಾಗ್ರತೆ ವಹಿಸಬೇಕು ಎಂದರು.


ಎಲ್ಲಾ ಮದ್ರಸಗಳಲ್ಲಿ, ಮಾದಕ ವಸ್ತು ವಿರೋಧಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಸಮಸ್ತ ವಿದ್ವಾಂಸ ಸಂಘಟನೆ ಜನತೆಗೆ ಅತ್ಯುತ್ತಮ ಸಂದೇಶ ನೀಡಿದೆ ಎಂದವರು ಹೇಳಿದರು.ನುಸ್ರತುಲ್ ಇಸ್ಲಾಂ ಜಮಾಅತ್ ಕಮಿಟಿ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ಅಧ್ಯಕ್ಷತೆ ವಹಿಸಿ ಮಾತನಾಡಿ,” ಸಮಾಜಕ್ಕೆ ಮಾರಕವಾಗಿರುವ ಮಾದಕ ವ್ಯಸನ ಇಡೀ ವ್ಯವಸ್ಥೆಯನ್ನು ಅಲ್ಲೋಲಕಲ್ಲೋಲ ಮಾಡಿದೆ.ಇದರ ಚಟಕ್ಕೆ ಬಿದ್ದವರು ಕೊಲೆ,ಹಲ್ಲೆ,ದರೋಡೆ ಸಹಿತ ಎಲ್ಲಾ ಅಕ್ರಮಗಳನ್ನು ನಡೆಸಿ ನಾಡಿನಲ್ಲಿ ಭಯಾನಕ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ.ಇದರ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯ ಎಂದು ಹೇಳಿದರು.
ಸದರ್ ಉಸ್ತಾದ್ ಅಬೂಬಕರ್ ಸಿದ್ದಿಕ್ ಫೈಝಿ ಪ್ರತಿಜ್ಞೆ ಬೋಧಿಸಿದರು.ಸಭೆಯಲ್ಲಿ ಜಮಾತ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಅಬ್ದುಲ್ಲಾ ಚಾಲ್‌ಕೆರೆ,ಮದ್ರಸ ಉಸ್ತುವಾರಿಗಳಾದ ಝುಬೈರ್ ಕೊಳಂಬೆ ಹಾಗೂ ಶರೀಫ್ ಅಂಗಡಿ, ಮದ್ರಸ ಅಧ್ಯಾಪಕರಾದ ಇಬ್ರಾಹಿಂ ಝುಹ್‌ರಿ ಕುಂಬ್ರ, ತಾಜುದ್ದೀನ್ ಸಅದಿ ಅಲ್ ಹುಮೈದಿ, ಇಬ್ರಾಹಿಂ ಸಅದಿ ಮಾಡನ್ನೂರ್,ಶುಹೈಲ್ ದಾರಿಮಿ ಮಾಡನ್ನೂರ್ ಹಾಗೂ ಹಳೆ ವಿದ್ಯಾರ್ಥಿ ಬಾಝಿಲ್,ಎಸ್‌ಕೆಎಸ್‌ಬಿವಿ ಅಧ್ಯಕ್ಷ ಇರ್ಫಾನ್,ಕಾರ್ಯದರ್ಶಿ ಮಸೂದ್,ಕೋಶಾಧಿಕಾರಿ ರಾಫಿಹ್ ಹಾಗೂ ಸದಸ್ಯರು ಮತ್ತು ಮದ್ರಸ ವಿದ್ಯಾರ್ಥಿಗಳು ಪಾಲ್ಗೊಂಡರು.