ಆತೂರು: ಎಸ್‌.ಕೆ.ಎಸ್‌.ಎಸ್‌.ಎಫ್ ವತಿಯಿಂದ ಸಾಮೂಹಿಕ ವಿವಾಹ

0

ರಾಮಕುಂಜ: ಬದ್ರಿಯಾ ಜುಮಾ ಮಸೀದಿ ಆತೂರು ಹಾಗೂ ಎಸ್‌ಕೆಎಸ್‌ಎಸ್‌ಎಫ್ ಆತೂರು ಶಾಖೆ ಇದರ ವತಿಯಿಂದ 2 ಬಡ ಹೆಣ್ಣುಮಕ್ಕಳ ವಿವಾಹ ಕಾರ್ಯಕ್ರಮ ಮೇ.18 ರಂದು ಆತೂರು ಸುಲ್ತಾನುಲ್ ಹಿಂದ್ ವೇದಿಕೆಯಲ್ಲಿ ನಡೆಯಿತು.


ಉಸ್ತಾದ್ ಉಸ್ಮಾನ್ ಫೈಝಿ ತೋಡರು ನಿಖಹ್‌ಗೆ ನೇತೃತ್ವ ನೀಡಿ ಸಂದೇಶ ಭಾಷಣ ಮಾಡಿದರು. ಅಸ್ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಆತೂರು ಕಾರ್ಯಕ್ರಮ ಉದ್ಘಾಟಿಸಿ ದುಹಾಗೆ ನೇತೃತ್ವ ನೀಡಿದರು. ಅಹಮ್ಮದ್ ಕುಂಞಿ ಅಧ್ಯಕ್ಷತೆ ವಹಿಸಿದರು. ಮುಹಮ್ಮದ್ ಮುಸ್ಲಿಯಾರ್ ಮುಂದೊಳೆ ಮುಖ್ಯ ಪ್ರಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಸತ್ತಾರ್ ಅಸ್‌ನವಿ, ಆಸೀಫ್ ಆಝ್‌ಹರಿ, ಅಬ್ದುಲ್ ಸಮದ್ ಅನ್ಸಾರಿ, ಹಂಝ ಸಖಾಫಿ, ಹನೀಫ್ ಅಸ್ಲಾಮಿ, ರಿನಾಝ್ ಬುರ್‌ಹಾನಿ, ಬಶೀರ್ ಸಹದಿ ನಾವೂರು, ಸಫ್ವಾನ್ ಜಾಹರಿ ಬೈತಡ್ಕ, ಅಬ್ದುಲ್ಲಾ ಮುಸ್ಲಿಯಾರ್, ಸೌಕತ್ ಅಸ್ಲಾಮಿ, ಮುಹಮ್ಮದ್ ಸಫ್ವನ್ ಯಮಾನಿ, ಅಬ್ದುಲ್ ರಹಿಮಾನ್, ಸಿದ್ದಿಕ್ ಫೈಝಿ, ಬಿ.ಕೆ.ಮುಹಮ್ಮದ್ ಹಾಜಿ, ಖಲೀಲ್ ಹಾಜಿ, ಮುಹಮ್ಮದ್ ರಫೀಕ್ ಜಿ, ಇಸಾಕ್ ಎನ್.ಎ., ನೌಫಲ್, ಅಶ್ರಫ್, ಎಚ್.ಗಫರ್ ಹಾಜಿ, ಬಿ.ಆರ್.ಅಬ್ದುಲ್ ಖಾದರ್, ಇಸ್ಮಾಯಿಲ್ ವೈ, ಹನೀಫ್ ಜನಪ್ರಿಯ, ನಾಸಿರ್ ಕಲಾಯಿ, ಇಸ್ಮಾಯಿಲ್ ಗೋಳಿತ್ತಡಿ, ಅಝೀಝ್ ಪಾಲ್ತಾಡಿ, ನಾಸೀರ್ ಮರೋಡಿ, ಜೈನುದ್ದೀನ್, ಸಿರಾಜ್, ಉಮರುಲ್ ಫಾರೂಕ್, ಮುನೀರ್ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಸನ್ಮಾನ:
ಸಮಸ್ತ ಪಬ್ಲಿಕ್ ಪರೀಕ್ಷೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಅಬೂ ಉವೈಸ್ ಅಸ್ಲಾಮಿ ಖಿರಹತ್ ಪಠಿಸಿದರು. ಝಕರಿಯಾ ಮುಸ್ಲಿಯಾರ್ ಸ್ವಾಗತಿಸಿದರು, ರಫೀಕ್ ಗೋಳಿತ್ತಡಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಎಸ್‌ಕೆಎಸ್‌ಎಸ್‌ಎಫ್ ಆತೂರು ಕ್ಲಸ್ಟರ್ ಅಧ್ಯಕ್ಷ ಸಿದ್ದೀಕ್ ಎನ್., ಶಾಖೆ ಅಧ್ಯಕ್ಷರಾದ ಬಿ.ಕೆ.ಅಬ್ದುಲ್ ರಝಾಕ್, ಮಸೀದಿ ಕಾರ್ಯದರ್ಶಿ ಸಿರಾಜ್ ಬಡ್ಡಮೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here