ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವಿಟ್ಲ ಇದರ ಪೆರ್ನೆ ವಲಯದ ಪೆರ್ನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಾಜೆ “ಹಿಂದೂ ರುದ್ರಭೂಮಿ ಅಭಿವೃದ್ಧಿ”ಗೆ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಮಂಜೂರಾಗಿರುವ ರೂ.2,50,000/- ಅನುದಾನದ ಮಂಜೂರಾತಿ ಪತ್ರವನ್ನು ದಕ್ಷಿಣ ಕನ್ನಡ -2 ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ್ ರವರು ಸಮಿತಿ ಸದಸ್ಯರಿಗೆ ವಿತರಿಸಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಜನಜಾಗೃತಿ ವೇದಿಕೆಯ ಸದಸ್ಯರಾದ ನವೀನ್ ಕುಮಾರ್ ಪದಬರಿಯವರು ಮಾತನಾಡಿ, ಹನುಮಾಜೆ ಹಿಂದೂ ರುದ್ರಭೂಮಿ ರಚನೆಯ ಹಿನ್ನಲೆಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಾ, ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಪಂಚಾಯಿತಿ ಕಾರ್ಯದರ್ಶಿ ರಾಜೇಶ್ ಮತ್ತು ಪಂಚಾಯಿತಿ ಸದಸ್ಯರು, ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸೂರಪ್ಪ ಪೂಜಾರಿ, ಕಾರ್ಯದರ್ಶಿ ರವಿಚಂದ್ರ ಮತ್ತು ಸಮಿತಿ ಸದಸ್ಯರು, ಒಕ್ಕೂಟದ ವಲಯಾಧ್ಯಕ್ಷ ರಾಬರ್ಟ್ ಫೆರ್ನಾಂಡಿಸ್, ವಲಯ ಮೇಲ್ವಿಚಾರಕರು, ಸೇವಾಪ್ರತಿನಿಧಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಮತ್ತು ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.