ಹಿರೆಬಂಡಾಡಿ ಸ್ವಾಮಿ ಕೊರಗಜ್ಜ ಕ್ಷೇತ್ರದ ಪ್ರತಿಷ್ಠಾ ಕಲಶಾಭಿಷೇಕ-ಹೊರೆಕಾಣಿಕೆ ಸಮರ್ಪಣೆ

0

ಹಿರೆಬಂಡಾಡಿ: ಜೀರ್ಣೋದ್ಧಾರಗೊಂಡಿರುವ ನೆಹರುತೋಟ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಮೇ.21ರಂದು ಬೆಳಿಗ್ಗೆ ಪ್ರತಿಷ್ಠಾ ಕಲಶಾಭಿಷೇಕ ನಡೆಯಲಿದ್ದು ಇದರ ಅಂಗವಾಗಿ ಮೇ.20ರಂದು ಬೆಳಿಗ್ಗೆ ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.


ಮುರದಮೇಲು ಮಂಜುಶ್ರೀ ಭಜನಾ ಮಂದಿರದಿಂದ ಹೊರೆಕಾಣಿಕೆ ಮೆರವಣಿಗೆಯು ದೈವಸ್ಥಾನಕ್ಕೆ ಆಗಮಿಸಿತು. ಕ್ಷೇತ್ರದ ಆಡಳಿತ ಹಾಗೂ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ವಿಜಯಭಾನು ಗೌಡ ಗುಂಡ್ಯ, ಅಧ್ಯಕ್ಷ ಆಧಿರಾಜ ಶಾಂತಿತ್ತಡ್ಡ, ಕಾರ್ಯದರ್ಶಿ ಪ್ರಶಾಂತ ಕರೆಂಕಿ, ಖಜಾಂಜಿ ನಾಗರಾಜ ಸೀಂಕ್ರುಕೊಡಂಗೆ, ಸದಸ್ಯರಾದ ಸತೀಶ ವಳಕಡಮ, ಪ್ರಸನ್ನ ನೆಹರುತೋಟ, ಪ್ರವೀಣ ನೆಹರುತೋಟ, ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮೋಹನ್‌ದಾಸ್ ಗೌಡ ನೆಹರುತೋಟ, ಅಧ್ಯಕ್ಷ ಹೊನ್ನಪ್ಪ ಖಂಡಿಗ ಶಾಖೆಪುರ, ಉಪಾಧ್ಯಕ್ಷ ವಿನಯ ರೈ ಕೊಯಿಲಪಟ್ಟೆ, ಜೊತೆ ಕಾರ್ಯದರ್ಶಿ ಹರಿಶ್ಚಂದ್ರ ಮಾಳ, ಸದಸ್ಯರಾದ ನಾರಾಯಣ ಕನ್ಯಾನ, ಅಶೋಕ ಹಲಸಿನಕಟ್ಟೆ, ಹರಿಣಾಕ್ಷಿ ಶೆಟ್ಟಿ ಮದಿಮೆತ್ತಿಮಾರ್ ಹಾಗೂ ವಿವಿಧ ಸಮಿತಿಯ ಸದಸ್ಯರು ಮೆರವಣಿಯಲ್ಲಿ ಪಾಲ್ಗೊಂಡಿದ್ದರು.

ಮೇ 21ರಂದು ಬೆಳಿಗ್ಗೆ ದೈವಜ್ಞ ಹರಿಪ್ರಸಾದ್ ವೈಲಾಯರ ನೇತೃತ್ವದಲ್ಲಿ ಸ್ವಸ್ತಿ ಪುಣ್ಯಾಹ, ಗಣಯಾಗ ಪ್ರತಿಷ್ಠೆ, ಪ್ರಧಾನಹೋಮ ನಡೆದು 8.52ರ ಮಿಥುನ ಲಗ್ನ ಶುಭ ಮುಹೂರ್ತದಲ್ಲಿ ದೈವ ಪ್ರತಿಷ್ಠೆ, ಪಂಚವಿಂಶತಿ ಕಲಶಾಭಿಷೇಕ, ಮಹಾಪೂಜೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಧಾರ್ಮಿಕ ಸಭೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕೊರಗಜ್ಜ ದೈವದ ಭಂಡಾರ ತೆಗೆಯುವುದು, ರಾತ್ರಿ ಅನ್ನಸಂತರ್ಪಣೆ, ಕೊರಗಜ್ಜ ದೈವದ ಕೋಲ ನಡೆಯಲಿದೆ.

LEAVE A REPLY

Please enter your comment!
Please enter your name here