ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ದೇವಸ್ಯ ಕಜೆಯಲ್ಲಿ ಯುವ ಸಂಘಟಕ ಗಿರಿಶಂಕರ್ ಸುಲಾಯರವರು ನೂತನವಾಗಿ ನಿರ್ಮಿಸಿದ “ಸುಮಗಿರಿ” ಗೃಹ ಪ್ರವೇಶ ಮೇ.19 ರಂದು ಜರಗಿತು.

ಪೂರ್ವಾಹ್ನ ಗಣಹೋಮ, ಸತ್ಯನಾರಾಯಣ ಪೂಜೆ, ವಿವಿಧ ಭಜನಾ ತಂಡಗಳಿಂದ ಭಜನೆ, ರಾತ್ರಿ ದುರ್ಗಾ ಪೂಜೆ ನಡೆಯಿತು. ಸಮಾರಂಭದಲ್ಲಿ ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮುಖಂಡರುಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಊರ-ಪರವೂರ ಹಿತೈಷಿಗಳು, ಕುಟುಂಬಸ್ಥರು ಹಾಗೂ ಬಂಧುಗಳು ಭಾಗವಹಿಸಿದರು. ಈಶ್ವರಿ ಟಿ.ಸುಲಾಯ, ಗಿರಿಶಂಕರ್ ಸುಲಾಯ, ಸುಜಯ ಜಿ.ಸುಲಾಯ ಹಾಗೂ ಮಾನ್ವಿ ಜಿ.ಸುಲಾಯರವರು ಅತಿಥಿಗಳನ್ನು ಸ್ವಾಗತಿಸಿ, ಗೌರವಿಸಿದರು.