ವಿದ್ಯಾಕೇಂದ್ರಗಳು ಮಕ್ಕಳ ಭವಿಷ್ಯವನ್ನು ಅರಳಿಸುತ್ತದೆ-ಕೆ.ಟಿ ಅಬ್ದುಲ್ಲ ಫೈಝಿ
ಪುತ್ತೂರು: ರೆಂಜಲಾಡಿ ಇಸ್ಲಾಮಿಕ್ ಸೆಂಟರ್‌ನಲ್ಲಿ 2025-26ನೇ ಸಾಲಿನ ತರಗತಿ ಪ್ರಾರಂಭಕ್ಕೆ ಮೇ.18ರಂದು ಚಾಲನೆ ನೀಡಲಾಯಿತು.
ಖ್ಯಾತ ವಿದ್ವಾಂಸ ಕೆ.ಟಿ.ಅಬ್ದುಲ್ಲ ಫೈಝಿ ವೆಳ್ಳಿಮುಕ್ಕ್ ಅವರು ವಿದ್ಯಾರ್ಥಿಗಳಿಗೆ ಖುರ್‌ಆನಿನ ಸೂಕ್ತವನ್ನು ಪಠಿಸಿಕೊಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ವಿದ್ಯೆ ಎನ್ನುವುದು ಪ್ರತಿಯೋರ್ವರಿಗೂ ಅತ್ಯವಶ್ಯಕವಾಗಿದ್ದು ಮಕ್ಕಳ ಭವಿಷ್ಯವನ್ನು ವಿದ್ಯಾಕೇಂದ್ರಗಳು ಅರಳಿಸುತ್ತದೆ, ಎಷ್ಟು ಮಕ್ಕಳು ಸಂಸ್ಥೆಯಲ್ಲಿದ್ದಾರೆ ಎನ್ನುವುದಕ್ಕಿಂತ ಇರುವ ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ಸಿಗುತ್ತಿದೆ ಎನ್ನುವುದು ಮುಖ್ಯ ಎಂದು ಅವರು ಹೇಳಿದರು. ಶಿಕ್ಷಣ ಸಂಸ್ಥೆ ನಡೆಸುವುದಕ್ಕೆ ಬಹಳ ಕಷ್ಟವಿದೆ, ಸಂಸ್ಥೆಗೆ ನಾವು ಪ್ರೋತ್ಸಾಹ ನೀಡಿದರೆ ಅದನ್ನು ಸುಲಭವಾಗಿ ಮುನ್ನಡೆಸಬಹುದು ಎಂದ ಅವರು ಧಾರ್ಮಿಕ ಲೌಕಿಕ ಶಿಕ್ಷಣ ನೀಡುವ ಕನಸಿನೊಂದಿಗೆ ಹುಸೈನ್ ದಾರಿಮಿಯವರು ಆರಂಭಿಸಿರುವ ಈ ಸಂಸ್ಥೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಹಾಜಿ ಇಬ್ರಾಹಿಂ ಮುಂಡಿತ್ತಡ್ಕ ಮಾತನಾಡಿ ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಿದಾಗ ಮಾತ್ರ ಅದು ಬೆಳಗಲು, ಅಭಿವೃದ್ಧಿ ಹೊಂದಲು ಸಾಧ್ಯ, ಹುಸೈನ್ ದಾರಿಮಿ ನೇತೃತ್ವದ ಆರ್.ಐ.ಸಿ ಸಂಸ್ಥೆ ಜೊತೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದು ಹೇಳಿದರು.
ಪ್ರಸ್ತಾವನೆಗೈದ ಆರ್.ಐ.ಸಿ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ರೆಂಜಲಾಡಿ ಇಸ್ಲಾಮಿಕ್ ಸೆಂಟರ್‌ನಲ್ಲಿ ಈ ವರ್ಷದ ತರಗತಿ ಆರಂಭಗೊಳ್ಳುತ್ತಿದ್ದು ಇಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವುದು ನಮ್ಮ ಧ್ಯೇಯವಾಗಿದೆ, ನಮ್ಮಲ್ಲಿ ದಾಖಲಾಗುವ ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ನಾಡಿನ ಸತ್ಪ್ರಜೆಯನ್ನಾಗಿ ರೂಪಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
ನಮ್ಮಲ್ಲಿ 5ರಿಂದ 10ನೇ ತರಗತಿ ವರೆಗೆ ಧಾರ್ಮಿಕ ವಿದ್ಯೆಯೊಂದಿಗೆ ಲೌಕಿಕಶಿಕ್ಷಣವನ್ನು ಪಡೆಯುವ ಅವಕಾಶವಿದ್ದು ದೂರದ ಊರಿನ ವಿದ್ಯಾರ್ಥಿಗಳಿಗೆ ಇಲ್ಲೇ ಉಳಿದುಕೊಂಡು ಶಿಕ್ಷಣ ಪಡೆಯುವ ಹಾಸ್ಟೆಲ್ ವ್ಯವಸ್ಥೆಯೂ ಇದೆ, ಕಲಿಕೆಯಲ್ಲಿ ತೀರಾ ಹಿಂದುಳಿದ ವಿದ್ಯಾರ್ಥಿಗಳನ್ನು ಹೆಚ್ಚಾಗಿ ಇಲ್ಲಿ ಸೇರ್ಪಡೆಗೊಳಿಸುತ್ತಿದ್ದು ಅವರನ್ನು ಮಾದರಿ ವಿದ್ಯಾರ್ಥಿಗಳನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದೆ, ಸಂಸ್ಥೆಯ ಅಭಿವೃದ್ಧಿಗೆ ಎಲ್ಲರ ಸಹಕಾರವನ್ನು ನಾವು ಬಯಸುತ್ತಿದ್ದೇವೆ ಎಂದು ಅವರು ಹೇಳಿದರು.

ಪ್ರಮುಖರಾದ ಯೂಸುಫ್ ಹಾಜಿ ಕೈಕಾರ, ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಮಂಗಳ ಅಬೂಬಕ್ಕರ್ ಹಾಜಿ ಬೆಳ್ಳಾರೆ, ಪಿ.ಕೆ ಮಹಮ್ಮದ್ ಕೂಡುರಸ್ತೆ, ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ ಕೊಡಂಗಾಯಿ, ಮಾಹಿನ್ ದಾರಿಮಿ ಪಾತೂರು, ಎಂ.ಎಸ್.ಮುಹಮ್ಮದ್, ಕೆ.ಎಂ.ಎ.ಕೊಡುಂಗಾಯಿ, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಯಾಕೂಬ್ ದಾರಿಮಿ, ನಾಸಿರ್ ಫೈಝಿ ರೆಂಜಲಾಡಿ, ಅಬ್ಬಾಸ್ ಮದನಿ ಪುತ್ತೂರು, ಇರ್ಶಾದ್ ಫೈಝಿ ಮುಕ್ವೆ, ಝೈನುದ್ದೀನ್ ಹಾಜಿ ಮುಕ್ವೆ, ಅಬೂಬಕ್ಕರ್ ಮುಸ್ಲಿಯಾರ್, ಆರ್.ಎಂ ಅಲಿ ಹಾಜಿ, ಉಮ್ಮರ್ ಸುಲ್ತಾನ್ ರೆಂಜಲಾಡಿ, ಶಾಫಿ ಇಂಜಿನಿಯರ್ ಪಾಪೆತ್ತಡ್ಕ, ಇಬ್ರಾಹಿಂ ಬಾತಿಷಾ ಪಾಟ್ರಕೋಡಿ, ಮಜೀದ್ ಬಾಳಾಯ, ಸಿದ್ದೀಕ್ ಸುಲ್ತಾನ್, ರಹೀಂ ರೆಂಜಲಾಡಿ, ಅಝೀಝ್ ರೆಂಜಲಾಡಿ, ಆಸಿಫ್ ರೆಂಜಲಾಡಿ, ಬಶೀರ್ ಪರಾಡ್, ಇಸ್ಮಾಯಿಲ್ ಕಟ್ಟತ್ತಡ್ಕ ಮತ್ತಿತರ ಹಲವಾರು ಮಂದಿ ಉಪಸ್ಥಿತರಿದ್ದರು.